ಸಾಧುರ ಮಹಿಮೆಯು ಸಾಧಿಸದೆ ತಿಳಿಯದು
ಭೇದಿಸದಲ್ಲದೆ ಹೊಳೆಯದಿದು ಧ್ರುವ
ತೆಂಗಿನ ಫಲದಂತವರ ಸಂಗದಸುಖ
ಹಿಂಗದಂತನುದಿನ ಅನುಭವಿಸುವದಲ್ಲದೆ 1
ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ
ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2
ಅಂತರಾತ್ಮದ ಸುಖ ಮಹಾತ್ಮರಗಲ್ಲದೆ
ಮೂಢಾತ್ಮರಿಗಿದು ಎಲ್ಲಿಹುದು 3
ಸಾಧು ಸಂತರ ನಿಜದಾಸ ಮಹಿಪತಿಗಿನ್ನು
ಸಾಧು ಸಂಗತಿ ಜೀವನ್ಮುಕ್ತಿಯು 4