ಇದೇ ದೇವ ಪೂಜಿಯು ನೋಡಿ
ಹೃದಯದಲಿ ನಿಜ ಒಡಗೂಡಿ ಧ್ರುವ
ಮೂರ್ತಿಎಂಬುದೆ ಅಮೂರ್ತಿ
ನಾಮರೂಪ ನಿಜ ಗುಹ್ಯವಾರ್ತಿ
ವ್ಯೋಮಾಕಾರದ ಮನೆಮೂರ್ತಿ
ಸ್ವಾಮಿ ಸದ್ಗುರುವಿನ ಕೀರ್ತಿ 1
ನಿತ್ಯನಿರ್ಗುಣ ನಿರ್ವಿಕಲ್ಪ
ಸತ್ಯಸದ್ಗುರು ಸ್ವರೂಪ
ನಿತ್ಯ ನಿತ್ಯದಿತ್ಯರ್ಥ ಸುದೀಪ
ತತ್ವಙÁ್ಞನ ಮನಮಂಟಪ 2
ಸ್ವಾನುಭವ ಸ್ವಾದೋದಕ
ಙÁ್ಞನ ಭಾಗೀರಥಿ ಅಭಿಷೇಕ
ಮೌನ ಮೌನ್ಯ ವಸ್ತ್ರಾಮೋಲಿಕ
ಧಾನ್ಯವೆಂಬುದೆ ಸೇವಿ ಅನೇಕ 3
ಗಂಧಾಕ್ಷತಿ ಪರಿಮಳ ಫಲಪುಷ್ಪ
ಬುದ್ಧಿ ಮನವಾಯಿತು ಸ್ವರೂಪ
ಸದ್ವಾಸನ್ಯಾಯಿತು ಧೂಪ ದೀಪ
ಸದ್ಭಾವನೆ ನೈವೇದ್ಯ ಮೋಪ 4
ಫಲತಾಂಬೂಲವೆ ಸದ್ಭಕ್ತಿ
ಮೂಲಜೀವ ಭಾವನೆ ಮಂಗಳಾರ್ತಿ
ಬಾಲಕ ಮಹಿಪತಿ ನಿಜಪೂಜಿಸ್ಥಿತಿ
ಕುಲಕೋಟಿ ಉದ್ಧರಿಸುವ ಗತಿ 5