ಹರಿ ಕೈಪಿಡಿಯೋ ಕೃಪಾವಿರಿಸೋ ದಾಸನಲಿ ಪ
ಸ್ಮರಿಸುವೆನನುದಿನ ಪರತರ ಪರಶಕ್ತಿ
ಸುರವರನೀನಲ್ಲವಿರುವರೆ ಪೊರೆವರು 1
ಶಿರಿಧರೆ ಸುರನರ ನೆರೆ ಓಲೈಸುತ
ಪರಮಪುರುಷ ನಿನ್ನ ಸ್ಮರಿಪರು ನಿರುತದಿ 2
ಹನುಮ ಭೀಮ ಮಧ್ವ ಮನಮುಟ್ಟಿ ಭಜಿಸುತ
ಘನನೀಲ ದೇವನೆ ನೆನೆವರ ಮನದಲಿ 3
ಹರಿ ನಿನ್ನ ಧ್ಯಾನವು ಹರಿವುದು ದುರಿತವ
ನÀರಸಿಂಹ ದೊರೆ ನಿನ್ನ ಮರೆವೆನೆ 4