ಗುರೋ ರಾಘವೇಂದ್ರ ಭೋ
ಸಾರ್ವಭೌಮ ಸದಾ ಪಾಲಿಸೆನ್ನ ಪ
ಪರೀಸರಾ ನÀಮಿಪೆ ನಿನ್ನಾ ಅ.ಪ
ಧರಾತಳದಿ ಧೇನು ವರಾನಂದದೀ
ಚರಾಜನರ ಕಾಮಾ
ಪರೀಪೂರ್ತಿಸಿ ದುರಾಳ ಸಂಗವ
ತ್ವರಾ ಕಳಿವೊ ಭೀಮಾ 1
ಭಯಾಹರನೆ ಸದ್ದಯಾಕರನೆ ಆ -
ಮಯಾದೂರ ನಿನ್ನ
ಜಯಾ ಪಾಲಿಸೋ ಧಿಯಾ ಬೇಡುವೆನು
ನಯಾ ಮತೀತ್ಯನ್ನಾ 2
ನೀತಾ ಗುರು ಜಗನ್ನಾಥಾ ವಿಠಲ ಪಾದ
ಪಾಥೋಜಯುಗವನ್ನಾ
ವ್ರಾತ ಪಾಲಿಸೊ ನಿಜ -
ದೂತಾ ಜನಾರನ್ನಾ 3