ಜಗಜಗಿಸುವ ಈ ಸೊಗಸಿನ ಪೀಠಕೆ
ನಗುನಗುತ ಬಾರೊ ದೇವ ಪ
ಗಗನರಾಯನಿಗೆ ಮಗಳೆಂದೆನಿಸಿದ
ಜಗಕೆ ಜನನಿ ಕೈಮುಗಿದು ಪ್ರಾರ್ಥಿಸುವಳು ಅ.ಪ
ಅಂಗನೆಯರು ಶ್ರವಣಂಗಳ ತುಂಬುವ
ಸಂಗೀತದ ಸಾರಂಗಳರ್ಪಿಸುವರೊ 1
ನಾದಸ್ವರದ ಸೊಗಸಾದ ಧ್ವನಿಗಳಲಿ
ನಾದ ಬ್ರಹ್ಮನು ತಾ ಕಾದು ನೋಡುತಲಿಹ 2
ಪರಿಮಳ ಪುಷ್ಪದ ಸುರಿಮಳೆ ನೋಟವು
ಸ್ಮರಣೆಗೆ ತರುವುದು ಸಿರಿಯ ವಿವಾಹವ 3
ಭೂಸುರರೆಲ್ಲರು ಆಶೀರ್ವಚನವ
ಶ್ರೀಶ ನಿನ್ನಯ ಸಂತೋಷಕೆ ನುಡಿವರು 4
ಸುಖ ಸಂತೋಷವು ಮುಖ ಮುಖದಲಿಹುದು
ತವ ಸುಖಾಗಮನದಿಂ ಲಕುಮೀ ಪ್ರಸನ್ನನೇ 5