ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1 ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2 ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3 ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4 ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣಾಕರ ಕೃಪಾಲ ಶ್ರೀ ಗುರು ಎನ್ನ ಕಾಯೊ ದಯದಿಂದೆನ್ನ ಪರಮಪಾವನ ಧ್ರುವ ಹುಟ್ಟಿಸಿಹ್ಯ ಜೀವನ ಸೃಷ್ಟಿಯೊಳು ನಾ ನಿಮ್ಮ ದೃಷ್ಟಿಸಿ ನೋಡಲು ಎನ್ನ ಕಷ್ಟಪರಿಹಾರ ಶಿಷ್ಟಜನ ಪ್ರತಿಪಾಲ ದುಷ್ಟಜನ ಸಂಹಾರ ಎಷ್ಟೆಂದು ಪೊಗಳಲಯ್ಯ ಕೃಷ್ಣಕೃಪಾಲ 1 ಇನ್ನೊಂದು ಅರಿಯೆ ನಾ ಅನ್ಯಪಥÀವೆಂಬುದನು ನಿನ್ನ ಚರಣಕೆ ಪೂರ್ಣ ನಂಬಿಹ್ಯನು ಭಿನ್ನವಿಲ್ಲದೆ ಎನ್ನ ಚನ್ನಾಗಿ ಸಲಹಯ್ಯ ಧನ್ಯಗೈಸೊ ಪ್ರಾಣ ಚಿನ್ಮಯನೆ 2 ವಾಸನೆಯ ಪೂರಿಸೊ ವಿಶ್ವವ್ಯಾಪಕ ಎನ್ನ ಭಾಸ್ಕರಕೋಟಿ ಪ್ರಕಾಶ ಪೂರ್ಣ ಲೇಸು ಲೇಸಾದಿ ಪಾಲಿಸೊ ವಾಸುದೇವನೆ ದಾಸಾನುದಾಸ ನಿಜದಾಸ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮದಯಾನಿಧೆ ಧ್ರುವ ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ ದೃಢಗೊಳಿಸುವ ಙÁ್ಞನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ 1 ಬಟ್ಟೆ ಕೊಟ್ಟು ಕಾಯೊ ಸತ್ಸಂಗವ ಮುಟ್ಟಿಮುದ್ರಿಸೊದೃಷ್ಟಾಂತವ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ 2 ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು