ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ವಂದಿಸುವೆ ನಲಿದಾಡುವೇ ಪ ಪವಿತ್ರಳಾದೇ ನಿತ್ಯ ಪರಮಾತ್ಮನ ಕಂಡು ಕೃತಾರ್ಥಳಾದೇ 1 ವಜ್ರ ಮಂಟಪ ವೈಭವನೋಡಿದೆ ನೋಡಿ ಉಧೃತಳಾದೇ 2 ಸತ್ಯಧ್ಯಾನರು ಎತ್ತಿ ಮಾಡುವಂಥ | ಮಂಗಳಾರ್ತಿಯನೆ ಕಂಡೆನೇ ವಿಸ್ತರ ನೋಡಿದೆ3 ಕೊಂಡಾಡುವುದ ನಾ ಕೇಳಿದೆ ಹಿಂಡು ಪಡೆವುದ ನೋಡಿದೆ 4 ಮುಟ್ಟಿಪೂಜಿಸಿದ ಮೂರ್ತಿಯು ಮತ್ತೆ ಕುಬೇರನ ಅಳಕಾ ಪಟ್ಟಣವೇ ಪ್ರತ್ಯಕ್ಷ ಬಂದಿರುವುದಿಲ್ಲಿ 5 ಬೆಳ್ಳಿ ಭಂಗಾರದ ಮಿಳ್ಕೆ, ತಂಬಿಗಿ ಢಾಲಿಯನು ಕೈಯಲಿ ಜನರು ಕೊಂಡೊಯ್ವರು ಭಾಳಿರುವುದು 6 ಪ್ರತ್ಯಕ್ಷವೈಕುಂಠವೆನಿಪುದೂ ದಾಯಪಿಡಿವರೂ 10 ನೋಡಿ ಸಂತುಷ್ಟಳಾದೇ ಈ ಮಠದಲಿ 11 ಮತ್ಯಾರಿಗೀಡಿಲ್ಲನೋಡು ಸೃಷ್ಟಿವೊಳಗಿನವರಿಗೀಡಿಲ್ಲನೋಡು 12 ವಾದಿಮತದ್ವಾದಿನೀ ಸೋಲಿಸುವರು | ಮಾಯಮತಿಗಳ ಮಾಯಮಾಡುವರೂ ಪಾಠದಿಬೋಧಿಸುವರೂ 13 ಸುರಲೋಕ ಪೂಜ್ಯರಿವರೂ ಶಿರೋಮಣಿಯೆಂದು ಕರೆಸಿಕೊಳ್ಳುವರೂ 14
--------------
ಓರಬಾಯಿ ಲಕ್ಷ್ಮೀದೇವಮ್ಮ
ಕಥಾಶ್ರವಣ ಮಾಡದೆ ನರದೇಹವ ವೃಥಾ ಕಳೆವದೆಂದಿಗು ಸಲ್ಲ ಪೃಥಾಸುತನ ಮಹರಥಾವನು ಸರ್ವಥಾ ಪೊರೆವ ಸಂಶಯವಿಲ್ಲ ಪ. ವಿಕಲಿ ಪ್ರವರ್ತನ ಲೋಲಿಕಾಗಮ ಕಲಾನುಕೃತ ದುಷ್ಕಾಲದಲಿ ಒಲಿವನು ನಿರ್ಮಲಗೊಳಿಸುತಲಿ ಸಲೀಲವೆ ಲಘುಕರ್ಮದಲಿ ಸುನೀಲವಕ್ಷ ಸ್ಥಳಾಂತರ ಶ್ರೀಲಲಾಮನನು ಕೊಂಡಾಡುತಲಿ 1 ಅಲ್ಪ ಸುಖವ ಸಂಕಲ್ಪಿಸುವರಿಗಹಿತಲ್ಪನೊಲಿಯ ತಾನೆಂದೆಂದು ನಾಲ್ವರಿ ಫಲಗಳನಿಪ್ಪನೆ ಸಂಸ್ಕøತಿಯಿಪ್ಪಂದದಿ ದಯದೋರೆಂದು ಒಪ್ಪಿಸಿ ಮತ್ತವನಿಪ್ಪುದನುಂಡು ನೀರಪ್ಪಣೆಯಲಿ ಸನ್ಮತಗೊಂಡು ಹಿಂಡು 2 ಸ್ಮರಣೆ ಮಾತ್ರದಿಂದಲವನು ಪಾಪವ ಕರಣವ ಶುದ್ಧೀಕರಿಸುತಲಿ ಸನ್ಮತಿ ಇರಿಸುವನು ಪುರು ಪುರುಷಾರ್ಥಕರ ಪದಪದ್ಮವನಿರಿಸಿ ಶಿರದಿ ಸತ್ಕರಿಸುವನು ಮನದಲ್ಲಿರಿಸಿದವರನನುಸರಿಸುವನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರ್ಗವಿ ದೇವಿಭೃಗುವಾರ ಬರಲಿಬೇಕು ಪ ಭೃಗುವಾರ ಬರಲಿಬೇಕ್ಹಗಲು ಪಾಯಸವುಂಡುನಗುತ ರಾತ್ರಿಲಿ ತಾಂಬೂಲಗಳ ಮೆಲ್ಲುವುದಕ್ಕೆ ಅ.ಪ. ನೂಪುರ ಮುಖ ಭೂಷನೀ ಪದ ಕುಣಿಸುತ್ತಶ್ರೀಪತಿ ಸಹ ಸುಖಾಲಾಪಗಳಾಡುತ 1 ಕಂಕಣ ಮುಖರತ್ನಾಲಂಕಾರಗಳನಿಟ್ಟುಕಿಂಕರರಿಗೆ ಮುಖಾಲಂಕಾರ ತೋರುತ2 ಶಂಕರ ಮುಖ್ಯ ಸುರಪುಂಖ ಮಧ್ಯದಿ ಶ್ರೀಮ-ದ್ವೇಂಕಟೇಶನ ದಿವ್ಯ ಟೊಂಕಾದೊಳಗೆ ಕೂತು 3 ಪಕ್ಷಿವಾಹನ ದಿವ್ಯ ವಕ್ಷಸ್ಥಳಾಶ್ರಿತೆಲಕ್ಷ್ಮೀಲೀಲಾಮೃತ ಲಕ್ಷ್ಮೀ ಕೇಳುವುದಕ್ಕೆ 4 ಇಂದಿರೇಶನ ಮೃದು ಸುಂದರೋತ್ಸಂಗದಿಪೊಂದಿ ಭಕ್ತರ ಪೂಜಾನಂದ ಭುಂಜಿಪುದಕ್ಕೆ 5
--------------
ಇಂದಿರೇಶರು
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ಪ ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ಅ.ಪ. ಕನಕರತ್ನಗÀಳಲ್ಲಿ ಕಾಲ್ಗಳನೆ ಹೂಡಿನಾಲ್ಕು ವೇದಗಳನ್ನು ಸರಪಣಿಯ ಮಾಡಿಅನೇಕ ಭೂಮಂಡಲವ ಹಗೆಯನು ಮಾಡಿಶ್ರೀಕಾಂತನುಯ್ಯಾಲೆಯನು ವಿರಚಿಸಿದರು1 ಆಶ್ಚರ್ಯಜನಕವಾಗಿ ನಿರ್ಮಿಸಿದಪಚ್ಚೆಯ ತೊಟ್ಟಿಲಲ್ಲಿಅಚ್ಚುತಾನಂತನಿರಲು ತೂಗಿದರುಮತ್ಸ್ಯಾವತಾರ ಹರಿಯ 2 ಧರ್ಮಸ್ಥಾಪಕನು ಎಂದು ನಿರವಧಿಕನಿರ್ಮಲ ಚರಿತ್ರನೆಂದುಮರ್ಮ ಕರ್ಮಗಳ ಪಾಡಿ ತೂಗಿದರುಕೂರ್ಮಾವತಾರ ಹರಿಯ 3 ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದುಪರಮ ಹರುಷದಲಿ ಪಾಡಿ ತೂಗಿದರುವರಹಾವತಾರ ಹರಿಯ4 ಕರಿಕುಂಭಗಳ ಪೋಲುವ ಕುಚದಲ್ಲಿಹಾರ ಪದಕವು ಹೊಳೆಯಲುವರ ವರ್ಣಿನಿಯರು ಪಾಡಿ ತೂಗಿದರುನರಸಿಂಹಾವತಾರ ಹರಿಯ 5 ಭಾನುಮಣಿಯರೆಲ್ಲರು ಯದುವಂಶಸೋಮನಿವನೆಂದು ಪೊಗಳಿನೇಮದಿಂದಲಿ ಪಾಡಿ ತೂಗಿದರುವಾಮನಾವತಾರ ಹರಿಯ6 ಸಾಮಜವರದನೆಂದು ಅತುಳ ಭೃಗು ರಾಮಾವತಾರವೆಂದುಶ್ರೀಮದಾನಂದ ಹರಿಯ ತೂಗಿದರುಪ್ರೇಮಾತಿರೇಕದಿಂದ7 ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂದುವಾಮನೇತ್ರೆಯರು ಪಾಡಿ ತೂಗಿದರುರಾಮಾವತಾರ ಹರಿಯ8 ಸೃಷ್ಟಿಯ ಕರ್ತ ನೆಂದು ಜಗದೊಳಗೆಶಿಷ್ಟ ಸಂತುಷ್ಟನೆಂದುದೃಷ್ಟಾಂತರಹಿತನೆಂದು ತೂಗಿದರುಕೃಷ್ಣಾವತಾರ ಹರಿಯ 9 ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ 10 ಥಳಥಳಾತ್ಕಾರದಿಂದ ರಂಜಿಸುವಮಲಯಜಲೇಪದಿಂದಜಲಗಂಧಿಯರು ಪಾಡಿ ತೂಗಿದರುಕಲ್ಕ್ಯಾವತಾರ ಹರಿಯ 11 ಕನಕಮಯ ಖಚಿತವಾದ ತಲ್ಪದಲಿವನಜಭವ ಜನಕನಿರಲುವನಜನಾಭನ್ನ ಪಾಡಿ ತೂಗಿದರುವನಿತಾಮಣಿಯರೆಲ್ಲರು 12 ಪದ್ಮರಾಗವ ಪೋಲುವ ಹರಿಪಾದಪದ್ಮವನು ತಮ್ಮ ಹೃದಯಪದ್ಮದಲಿ ನಿಲಿಸಿ ಪಾಡಿ ತೂಗಿದರುಪದ್ಮಿನೀ ಭಾಮಿನಿಯರು 13 ಹಸ್ತಭೂಷಣ ಮೆರೆಯಲು ದಿವ್ಯತರಹಸ್ತಲಾಘವಗಳಿಂದಹಸ್ತಗಳ ಪಿಡಿದುಕೊಂಡು ತೂಗಿದರುಹಸ್ತಿನೀ ಭಾಮಿನಿಯರು14 ಮತ್ತಗಜಗಾಮಿನಿಯರು ದಿವ್ಯತರಚಿತ್ರವಸ್ತ್ರಗಳನುಟ್ಟುಚಿತ್ತಸಂತೋಷದಿಂದ ತೂಗಿದರುಚಿತ್ತಿನೀ ಭಾಮಿನಿಯರು 15 ಕಂಕಣಧ್ವನಿಗಳಿಂದ ರಂಜಿಸುವಕಿಂಕಿಣೀಸ್ವರಗಳಿಂದಪಂಕಜಾಕ್ಷಿಯರು ಪಾಡಿ ತೂಗಿದರುಶಂಕಿನೀ ಭಾಮಿನಿಯರು 16 ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವಮಕರಿಕಾಪತ್ರ ಬರೆದುಲಿಕುಚಸ್ತನಿಯರು ಪಾಡಿ ತೂಗಿದರುಅಕಳಂಕಚರಿತ ಹರಿಯ17 ಆನಂದಸÀದನದೊಳಗೆ ಗೋಪಿಯರುಆ ನಂದಸುತನ ಕಂಡುಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ 19 ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವಗಂಧರ್ವರ್ಪಾಡಿ ತೂಗಿದರುದೇವ ಗಾಂಧಾರದಿಂದ 20 ನೀಲ ಕರುಣಾಲವಾಲ ಶ್ರೀಕೃಷ್ಣ ಜೋ ಜೋಲೀಲಾವತಾರ ಜೋ ಜೋ ಪರಮಾತ್ಮಬಾಲಗೋಪಾಲ ಜೋ ಜೋ 21 ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣಇಂದು ರವಿ ನೇತ್ರ ಜೋ ಜೋಇಂದುಕುಲ ಪುತ್ರ ಜೋ ಜೋ ಪರಮಾತ್ಮಇಂದಿರಾರಮಣ ಜೋ ಜೋ 22 ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ 23
--------------
ಶ್ರೀಪಾದರಾಜರು
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1 ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2 ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3 ಸತಿ ರೂಪಸ್ಥಳಾದರಿನ್ನೇನಿನ್ನೇನು ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4 ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5
--------------
ರಾಮದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು