ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನೆ | ನಮ್ಮ ರಂಗನೆ | ಮುನಿದನ್ಯಾತಕೆ ಪ್ರಾಣಲಿಂಗನೆ ಪ ನಿಜವಾದ ವಾಜಿಯ ಮಾಜುತ ಪೇಳಲು |ಸೋಜಿಗ ಮಾಡಲು ಮಂಗನೇನೆ ? 1 ಕೊಳಲನೂದಲು ಬಳಲದೆ ಮನವಿಟ್ಟು |ಕೇಳಲು ಮರುಳ ಕುರಂಗನೇನೆ ? 2 ಬಿಡದೆ ರಮಣಿಯನ್ನು ಎಡದಲ್ಲಿ ಬಿಡುವನು |ಮಡದಿ ಮಾರ್ಗದೊಳು ಹಂಗವೇನೆ ? 3 ಕೈಯಲ್ಲಿ ನೆರೆಯದೆ ಮೈಯಲ್ಲಿ ತೋರದೆ |ಸುಯ್ಯಲು ಬಿಡಲು ಭುಜಂಗನೇನೆ ? 4 ತಕ್ಕಾದ ನುಡಿಯನು ರುಕ್ಮೇಶನಾಡದೆ |ಅಕ್ಕ ಮಿಕ್ಕದ ವಿಹಂಗನೇನೆ ? 5
--------------
ರುಕ್ಮಾಂಗದರು
ಸೋತುಹೋಗಣ್ಣ ಮಾತುಬಂದಲ್ಲಿ ಜಾಣನಾಗಿ ಸೋತುಹೋಗಣ್ಣ ಮಾತುಬಂದಲ್ಲಿ ಪ ಸೋತುಹೋಗದೆ ಮಾತುಮಾತಿಗೆ ವಾದಿಸಲ್ಕೆ ಘಾತಕತನದ್ವಿಧಿಯು ಬಂದು ಆತುಕೊಂಡು ಕೂತುಕೊಳ್ವುದು ಅ.ಪ ಸೋತೆನೆನ್ನಲು ನಾಚಬೇಡಣ್ಣ ದೇವರು ಕೊಟ್ಟಿಹ್ಯ ಖ್ಯಾತಿಯೇನು ಹೋಗೋದಿಲ್ಲಣ್ಣ ಸುಳ್ಳಲ್ಲವಣ್ಣ ಸೋತೆನೆಂಬುದು ಜಯದ ಮಾತಣ್ಣ ಸತ್ಯ ತಿಳಿಯಣ್ಣ ನೀತಿಗಡಕರ ಮಾತಿನ ತಳ್ಳಿಗೋತ ಕುಣಿಯೊಳೆಳೆವ ಬಳ್ಳ್ಯೆಂದು ಮಾತನಾಡದೆ ಸುಮ್ಮನ್ಹೋಗಲು ನೀತಿವಂತರು ಮೆಚ್ಚುತಾರ 1 ದುಡುಕುಮಾತಿಗೆ ಮಿಡುಕಬೇಡಣ್ಣ ಸತ್ಯದ್ಹೇಳುವ ದೃಢತರ್ವಚನದ ಅಡಕು ತಿಳಿಯಣ್ಣ ಪಡಕೊ ಸುಖವಣ್ಣ ನೀ ತೊಡರಿಕೊಂಡರೆ ತಪ್ಪದು ಕಡೆಯತನಕ 2 ಸೋತೆನೆನದ್ಹತ್ತುವದನಂದೇನಾಯ್ತು ಸೋತು ಓಡಿದ ನೀತಿವಂತ ವಿಭೀಷಣಂದೇನಾಯ್ತು ಮತ್ತು ನಳರಾಜ ಸೋತ ರಾಜ್ಯ ಭಂಡಾರೆಲ್ಲ ಮುಳುಗಿತು ತಿಳಿ ನೀತಿ ಅರಿತು ಮಾತುಮಾತಿಗ್ವಾದಿಸಿ ಕುಲಘಾತಕ್ಕಾದನು ಕೌರವೇಂದ್ರನು ಸೋತಜನರಭಿಮಾನಿ ಶ್ರೀರಾಮ 3
--------------
ರಾಮದಾಸರು
ನದೀದೇವತೆಗಳ ಸ್ತುತಿ116ಸ್ಮರಿಸುವೆನನುದಿನ ಮುದದಿಂದ | ಈಧರಿಯ ಮ್ಯಾಲುಳ್ಳ ಮಹಾ ನದಿಗಳ ಪಗೌತಮನಘ ಪರಿಹಾರ ಮಾಡಿದ ಗೋದಾ |ಮಾತೆ ಶ್ರೀ ಕೃಷ್ಣವೇಣೀ ಸರಸ್ವತೀ ||ಆ ತರೂವಾಯ ಶ್ರೀ ಕಾವೇರಿ, ಸರಿಯು ಶ್ರೀ ಯಮುನಾ |ಧೌತ ಪಾತಕೆ ಶ್ರೀ ನರ್ಮದ ತುಂಗಾ 1ಸಿಂಧೂ ಭವನಾಶಿನಿ ಕುಮದ್ವತಿ ಶ್ರೀ ವಂಝಾರ |ಸುಂದರ ಭೀಮಾ ತಾಮ್ರಪರಣೀ ಮಲಹಾ ||ಮಿಂದರೆ ಪಾವನ ಮಾಡುವ ಬಹು ನದಿಗಳ |ಒಂದೇ ಮನಸಿಲಿಂದಾ ಪೊಗಳುವೆ 2ವಾರಣೀ ಫಲ್ಗುಣೀ ಶ್ರೋಣ ಭದ್ರಾ ಗಂಡಕಿಹೇಮ|ಮೂರುವೇಣಿಗಾಯತ್ರಿ ವೇಗವತೀ ||ಸೂರಿಗಮ್ಯ ಕೌಸಿಕ ಮಣಿಕರಣಿಕ ಗೌತಮಿ ಭಾ |ಗೀರಥಿ ಕಾಗಿನಿ ಶ್ರೀ ವೇತ್ರವತೀ3ಹೇಮವತಿ ನೇತ್ರವತಿ ಪಾಪನಾಶಿ ಶ್ರೀ ಸೀತಾ |ಆ ಮಹಾಳಕನಂದಾ ಹಯಗ್ರೀವ ||ಹೇಮಮುಖರ ತಾಪಿನಿ ಕಾಳಿ ಸೌಪರಣಿ ಪಿನಾಕೀ |ಶ್ರೀ ಮತ್ಕಪಿಲ ಜಮದಗ್ನಿಪ್ರಣವಸಿದ್ಧ4ಮರುದ್ವತಿ ಮದಿರ ಮೇನುಕಾ ಸೂನಾಸಿ ಚಕ್ರವತಿ |ಗರುಡ ಶಂಖವತೀ ಕುಹು ಮಹೇಶ್ವರೀ ||ಸರಯು ಜಯ ಮಂಗಳ ಯೋಗಕೃತು ಮಾಲಾ ಗದಾ |ಧರಿ ಮಾಲಿನೀ ಗಾರ್ಗಿಣೀ ದೇವವತಿ5ಸಾವಿತ್ರಿ ಧನ್ಯಮಾಲಾ ಧರ್ಮ ಚಕ್ರತೀರ್ಥಹರಿ|ದ್ರಾವತಿ ಇಂದ್ರಾಣಿ ಪಾತಾಳಗಂಗಾ ||ಶೈವಕುಂಡ ಕುಂಡಿನಿ ನೀರ ಕುಮಾರ ಧಾರೀ ಶು |ಶಾವರ್ತಿ ಮೌಳೀ ಲೋಕಪಾವನೀ 6ಸ್ವಾಮಿ ಪುಷ್ಕರ್ಣಿ ಚಂದ್ರ ಪುಷ್ಕರ್ಣಿ ಮಾನಸ ಪುಷ್ಕರ್ಣಿ |ಶ್ರೀ ಮಧ್ವ ಸರೋವರ ಪದ್ಮ ಸರಾ ||ಸೋಮಭಾಗಾ ವ್ಯಾಸಸಿಂಧುಶ್ರೀ ಪಂಪಾ ಸರೋವರ |ವಾಮನ ಶ್ರೀ ಮಯೂರ ಸರೋವರ 7ರೋಮ ಹರ್ಷಣ ತೀರ್ಥ ಸೀತಾ ಸರೋವರ ಪುಣ್ಯ |ಧಾಮಾ ಶ್ರೀ ಕಪಿಲತೀರ್ಥ ಧವಳಗಂಗಾ ||ಭೀಮಸೇನ ತಟಾಕಬ್ರಹ್ಮಜ್ಞಾನಕನ್ಯಹೃದಯ |ಶ್ರೀ ಮದ್ವಿಶಿಷ್ಟ ತೀರ್ಥ ತಾರಾ ತೀರ್ಥ 8ಈ ತೀರ್ಥಗಳ ದಿವ್ಯನಾಮನಿತ್ಯಪಠಿಸಲು |ಯಾತಕ್ಕಾದರೂ ವಿಘ್ನ ಬಾರದು ||ಮಾತರಿಶ್ವಪ್ರೀಯ ಪ್ರಾಣೇಶ ವಿಠಲನು ಬಹು |ಪ್ರೀತನಾಗಿ ಬಿಡದೆ ಪೊರೆವನು 9
--------------
ಪ್ರಾಣೇಶದಾಸರು