ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ
ನಿಸ್ಪøಹರಾಗದ ಜನರಿಗೆ ಕಡೆಯಲಿ
ಸಸೆÀ್ಪಂಟಾದೀತೆಂದು ತಿಳಿದು ಅ.ಪ
ಆಸೆಂಬುವದಾತ್ಮ | ರಾಜಾ
ತಾಸಗುಣ ಬ್ರಹ್ಮ
ಲೇಸಾಗಿ ರಾಣಿಯು ಮೂಲ ಪ್ರಕೃತಿ
ಗುಲಾಮನೆಂಬುದು ಚತುರ್ಮಖನೆನ್ನುತ 1
ದಹಿಲವೆಯಿಂದ್ರಿಯಗಳು | ದ್ವಾರವು
ನಹಿಲವಿದು ಭುವಿಯೋಳು
ಅಹಹಾ ಅಟ್ಟವು ಮದಗಳು ನೋಡಲು
ವಿಹಿತವೇಳನೆ ಬಂದು ವೆಸನಗಳು 2
ನಿಜವಿದು ಮೂರನೆ ಬಂದು ತ್ರಿಕಾಲಗಳ್ 3
ಯಿಲ್ಲದಿಹದು ಮರ್ಮ
ತುರುಫೆಗುಣರಾಶಿಗಳೆಂದೀಪರಿ
ಅರಿತಾಡಲದೆ ಪರಮಾರ್ಥವಹದು 4
ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್
ಈ ವಿಧ ಪೆಸರಿರಲೇನ್
ಭಕ್ತರ ಗುರುರಾಮ ವಿಠಲ ಕೈಬಿಡ 5