ಕಾಣಲಿಲ್ಲವೆಂದೆನಬೇಡಿ ಪ
ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು
ಡಾಣವ ತುಡುಕುವ ನೆರೆನೋಡಿ ಅ.ಪ
ಸುಲಭನು ನಿಮಗವನೊಲಿವನು ನಿಮ್ಮೆಡೆ
ನಿಲುವನು ನಲಿವನು ಕೈನೀಡೀ
ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ
ನುಲಿವನು ಚಲಿಸಲು ಬಿಡಬೇಡಿ 1
ಅಳುಕುತ ಬಳುಕತ ಬಳಲುತ ಸುಳಿಯುತೆ
ಘಳಿಲನೆ ಪೋಪನೆಚ್ಚರವಿರಲಿ
ಎಳನಗೆಯಿಂದ ಪಾಲೆರೆಯಿರಿ ಮನ
ದೊಳಚ್ಚಳಿಯದ ಮೋದವು ನೆಲೆಸಿರಲಿ 2
ಮನವೆಂಬುವುದೇ ವನರುಹವಮ್ಮಾ
ಕನಸುನೆನಸಿನೊಳಾ ವನಜವನರ್ಪಿಸೆ
ನೀನೆಂಬುದನೇ ಮರೆಯುವಿರಮ್ಮಾ
[ತನುಮನ ಅವನಡಿ ಸೇರುವುದಮ್ಮಾ] 3
ಪಡಸಾಲೆಯೊಳಿವ ನಿಲ್ಲುವನಲ್ಲಾ
ಅಡಿಗೆಯ ಕೋಣೆಯ ಬಿಡುವನಲ್ಲ
ಒಡೆಯ ಶ್ರೀಮಾಂಗಿರಿಪತಿಯನು ನೋಡದ
ಮಡದಿಯಿಲ್ಲವೆಂಬುದು ಸಟೆಯಲ್ಲ 4
ನೀವಿರುವಾಯೆಡೆ ಪಾಲ್ಗಡಲಮ್ಮಾ
ನೀವಡಿಯಿಡುವುದೇ ಕಡೆಗೋಲಮ್ಮಾ
ದಧಿ ನವನೀತವು
ನೀವಿರೆ ಮಾಂಗಿರಿರಂಗನುಂಟಮ್ಮಾ 5