ನಗುವಿನಿಂದಾರೋಗ್ಯ ಉಂಟೆಂಬರಯ್ಯ
ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ
ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ
ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ
ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ
ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ
ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ
ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ 1
ನಸುನಗೆಯು ಮನದ ಸಂತಸದ ಕುರುಹು
[ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ
ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ
ಹೊಸದಾದ ನಗು ಮಾಂಗಿರಿನಲವಿನಲಿ2