ಕಾಲಮಹಿಮೆ ಕೇಳಿ ಜಗದಾಲೋಚನೆ ತಾಳೀ ಪ
ಕೀಳು ಖೂಳರಿಗೆ ಮೇಲು ಹಾಸಿಗೆ ಮಂಚ
ಬಾಲಾಜಿ ಭಜನೆ ಜನಕೆ ಜೋಳಿಗೆ ಯೀ ಪ್ರಪಂಚಾ 1
ಉತ್ತಮಪುರುಷರಿಗೆಲ್ಲ ತುತ್ತಿಗೆ ಮಾನಹೋಗಿ
ಹೆತ್ತವ್ವೆ ಹೋಗೆ ಕಳ್ಳ ಚಿತ್ತರ್ಗೆ ಮಂಚಾ ತೂಗೆ 2
ಡಂಬಾಚಾರಿಗಳಿಗೆಲ್ಲಾ ಕೊಂಬು ಕುದುರೆಯಗಾಡಿ
ಶಂಬೂನುತರೂ ಪಾಪಿಗಾಡಿಗಳ ಹಿಂದೆ ವೋಡೆ 3
ನಿಚ್ಚಾ ಮುತ್ತೈದೆರ್ಗೆಲ್ಲಾ ಅಂಜಿಕೆ ಅರುಶನವಿಲ್ಲಾ
ಬಿಚ್ಚಾಲೆಯಿಲ್ಲದ ರಂಡೇರ್ಹೆಚ್ಚಿ ಹೀಗಾಯಿತಲ್ಲ 4
ದೋಷರಹಿತ ಹರಿದಾಸ ತುಲಸೀರಾಮಾ
ದೇಶಿಕಾ ತನ್ನ ನಿಜದಾಸಾನ ಮಾಡಿಕೊಂಡಾ 5