ಮೂಕನಾಗೋ ಮನವೆ ನಿನಗೆ
ಯಾಕೀ ಲೋಕ ಗೊಡವೆ ಪ
ಮೂಕನಾಗಿ ಬಹುಜೋಕೆಯಿಂದ ನಡಿ
ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ
ಹೇಳಿದರೇನಾದೋ ನೀ ಬಲು
ಕೇಳಿದರೇನಾದೊ
ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು
ನೀಲಶಾಮನ ಮನದಾಲಯದೊಳಗಿಟ್ಟು 1
ಅವನಿ ಗೊಡವೆ ಯಾಕೋ ಹರಿಯೆಂದು
ಭವಭಯವನು ಕಳಕೋ
ದಿವನಿಶಿ ನಿಜದನುಭವದೊಳಗಾಡುತ
ಭವಗೆಲುವಿನ ಸುದ್ದಿ ಭವಿಗಳಿಗುಸುರದೆ 2
ಪಾದ ಪಿಡಿಯೋ ಮುಂದಿನ್ನು
ಹುಟ್ಟು ಸಾವು ಗೆಲಿಯೊ
ದುಷ್ಟಮತಿಗಳ ಗೋಷ್ಠಿಗೆ ಹೋಗದೆ
ಬಿಟ್ಟಗಲದೆ ನಿಜಪಿಡಿದು ನೀತಿ 3
ಮತ್ರ್ಯಜನರ ಇದಿರು ನೀ ಬಲು
ಗುಪ್ತದಿಂದಿರು ಚದುರ
ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ
ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ 4
ನಂಬಿಗಿಲ್ಲದಲ್ಲಿ ಸುಬೋಧ
ಡಂಬವೆನಿಪುದಲ್ಲಿ
ಜಂಬವಡಿಯದೆ ಕುಂಭಿನಿಯೊಳು ನೀ
ನಂಬಿ ಶ್ರೀರಾಮನ ಗುಂಭದಿಂ ಭಜಿಸುತ 5