ದೈವಕೃಪೆ ಇದಲ್ಲಾ
ಇವರಿಗೆ ಭಾವ ಶುದ್ಧಿಯಿಲ್ಲಾ ಪ
ದೇವತೆಗಳು ಸಂತೋಷಿಸರೆಂದಿಗು
ನಾವೆಂಬಹಕಾರದಿ ಮಾಳ್ಪದರಲಿ ಅ.ಪ
ಮದುವೆಯ ಪೆಸರಿರಿಸಿ | ದೂರದಿಂ
ವಿವಿಧ ಬಂಧುಗಳ ಕರಸಿ
ವಧುವರರಿಗವರು ವುಡುಗೊರೆ ವೋದಿಸ-
ಲದನೇಯವರಿಗೆ ಹಿಂದಕ್ಕೆ ಕೊಡುವುದು 1
ಕೊಡದಿದ್ದರೆ ಕೋಪಾ | ಕೊಟ್ಟರೆ
ಕಡು ಮೂಢರಿಗೆ ಪುಣ್ಯವೆಲ್ಲಿಹುದು
ಸಡಗರ ಭ್ರಾಂತಿಯು ಡಂಬವು ಬರಿದೆ 2
ತಂತ್ರಗಳಾಚರಿಸೆ
ಯಂತ್ರೋದ್ಧಾರಕ ಗುರುರಾಮವಿಠಲಾ
ಸಂತಸಡುವನೆ ಧನವ್ಯಯ ಬರಿದೆ 3