ಅಮೃತ ಗಜಾನನ ಯನ್ನಾಲಯದಿ ತಗದಾ ಆನನಾ ಪ
ತನುಜನ ತನ್ವೀ ತನುವಿನ ಘನತರ ಬಾಧೆಯು
ಅನುದಿನಾದವರಾ ತೊಳಲಿಸೆ ಅನಷ್ಟೇಕದಂತ
ತನು ರಕ್ಷಿಸಿ ತನ್ನ ಜನರೆಂದೆಣಿಸೆಮ್ಮ ಮನದಿ ನೆಲಸೀದಾ 1
ಸಂತತಾನಂತ ಚೀಂತೆಯು ಅಂತರ ದುಗುಡವು
ಎಂತು ಕಂಗೆಡಿಸಿ ನೋಳ್ಪವು ಸುತಗಜಾನನ
ಸಂತ ಮಹಿಮ ಎನ್ನಂತ ತಿಳಿದು ತಾ ಚಿಂತೆಯ ತವಿಸಿದಾ 2
ಶಿರಿಯನ್ನಾ ಗುರುತಾವರಿಯಳು ಮೆರದಿ ಹರನು ಬಂದು
ನಿರುತ ನಿನ್ನನಾ ಸ್ತುತಿಪೆನು ಪರಿಪರಿನುತಿಪುದ
ನರಿತು ಗಜಮುಖನು ನರಸೀಂಹವಿಠ್ಠಲಗೆರಗಿ ಹರಸೀದಾ 3