(ಶ್ರೀಹರಿಯ ಮೋಹಿನಿ ರೂಪ)
ನೋಡಿರೊ ಸ್ತ್ರೀರೂಪವ ನೋಡಿರೋ ಪ.
ನೋಡಿರೊ ಹರಿಯ ಸ್ತ್ರೀರೂಪ ಸ್ತುತಿ
ಮಾಡಿರೊ ಮಹಿತಾ ಪ್ರತಾಪ ಅಹ
ಜೋಡಾದ ಸತಿಯರ ನೋಡಿ ನಗುತ ನಲಿ-
ದಾಡುವ ಶ್ರೀಕೃಷ್ಣ ಪ್ರಹುಡೆಯಾಗಿರುವುದ ಅ.ಪ.
ಭಾರ್ಗವ ವಾಸರದಲ್ಲಿ ಯತಿ ವರ್ಗವೆಲ್ಲವು ಸೇರುತಿಲ್ಲಿ ಪಂಚ
ಮಾರ್ಗಣಪಿತನಿದಿರಲ್ಲಿ ಅಷ್ಟವರ್ಗೋಪಚಾರಗಳಲ್ಲಿ ವಿಧಿ
ಭರ್ಗ ವಂದ್ಯ ಪ್ರಭು ದುರ್ಗಾರಮಣ ಸತ್ವ
ಸರ್ಗಪಾಲನ ಸನ್ಮಾರ್ಗದಿ ಸ್ತುತಿಪುದ 1
ಧೀರಮರಾಸುರರಂದು ಕ್ಷೀರವಾರಿಧಿ ತಡಿಯಲ್ಲಿ ಬಂದು ಬಹು
ಮಂದರ ಕಟ್ಟಿ ನಿಂದು ಸುಧ
ಸಾರವ ತೆಗೆಯಲು ಕಾರುಣ್ಯದಲಿ ದಾನ
ವಾರಿಗಳಿಗೆ ಕೊಟ್ಟ ನಾರಾಯಣಿಯನ್ನು 2
ನಾಯಕ ಧೀರ ಕಂಜ
ನಿವಹ ರಕ್ಷಿಸು ಗಂಭೀರಾ ಅಹ
ಪವನಾವತಾರನ ಸ್ತವನಕೊಲಿದು ಬಂದ
ಕವಿ ಶೇಷಗಿರಿವಾಸ ಭವಭಯಹಾರಿಯ 3