ರಾಯರೆ ಗತಿಯು ನಮಗೆ |
ವಾಯುಮತೋದ್ಧಾರ ಶ್ರೀ ರಾಘವೇಂದ್ರಗುರು ಪ
ಯುಕುತ ಮಾಗಿಹ ಚೂತ ಸುಕುಜ ಗತಿಯು |
ಅಕಳಂಕ ಶ್ರೀಮಂತ್ರಮಂದಿರದಿ ನೆಲೆಸಿಪ್ಪ 1
ಋಷಿಗಳಿಗೆ ಪ್ರಣವೆಗತಿ ಝಷಗಳಿಗೆ ಜಲವೆ ಗತಿ
ಸಸಿಗಳಭಿವೃದ್ಧಿಗೆ ಶಶಿರವಿ ಗತಿಯೊ
ಶಿಶುಗಳಿಗೆ ಜನನಿಗತಿ ಪಶುಗಳಿಗೆ ತೃಣವೆ ಗತಿ
ಅಸಮ ಮಹಿಮೆಯಲಿ ಮೆರೆವ ಮಿಸುನಿ ಶಯ್ಯಜರಾದ 2
ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತಗತಿ
ಭೂಮಿ ಬುಧರಿಗೆ ಮಧ್ವಶಾಸ್ತ್ರ ಗತಿಯೊ
ಧಾಮ ಭಯ ಪೋಪುದಕೆ
ಶಾಮಸುಂದರವಿಠಲ ಸ್ವಾಮಿ ನಾಮವೆ ಗತಿಯೊ 3