ಶ್ರೀ ನೀಲಕಂಠ ಮಹಾದೇವ ಶ್ರೀನೀಲಕಂಠ ಪ
ಶ್ರೀ ನೀಲಕಂಠ ಪಾವನಶೀಲ ಪರಮೇಶ
ಫಾಲಾಕ್ಷ ಫಣಿಭೂಷ ಪರಮ ಮಂಗಳಮೂರ್ತೆ ಅ.ಪ
ಸರ್ವಜ್ಞ ಸರ್ಬೇಶ ಶರ್ವ ಸದಾನಂದ
ಸರ್ವವಂದಿತಪಾದ ಸದಸತ್ಪರಾಧಾರ 1
ವಾಹನ ವಿಷಮ ವರ್ಜಿತ ದೇವ
ಝಷಕೇತನಾರ್ದನ ಜಯ ಭಕ್ತವತ್ಸಲ 2
ವಿಶ್ವೇಶ ವಿಶ್ವಾಧಾರಕ ವಿಶ್ವಕಾರಣ
ವಿಶ್ವ ವಿಶ್ವಾತ್ಮಕ ವಿಜಿತಪುರತ್ರಯ 3
ವರದೇಶ ವರದವರೇಣ್ಯ ಉಮಾಧವ
ಶರಣಾಗತಜನಭರಣ ಸುರದ್ರುಮ 4
ಭವ ತಿರುಪತಿ ಕ್ಷೇತ್ರ ಸ್ಥಿತ ಶ್ರೀ ವೆಂಕಟಮಿತ್ರಾಭವ ಕಕುದ್ಗಿರಿವಾಸ ಶಿವ ಗಂಗಾಧರ ಲಿಂಗ 5