ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ. ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ 1 ಕನಕಮಯ ಸರಪಳಿ ಥಳಥಳನೆ ಹೊಳೆಯೆ ಮಿನುಗುವಾಭರಣಗಳು ಝಗ ಝಗಿಸುತಿರಲು ಸನಕಾದಿ ಒಡೆಯನ ಫಣಿಪ ಹಿಂತೂಗೆ ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ 2 ವೇದವನೆ ಕದ್ದವನ ಕೊಂದವನೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ ಜಲಧಿ ಮೇದಿನಿ ತಂದೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ 3 ಬಲಿಯನೊಂಚಿಸಿದಂಥ ತರಳನೆ ಜೋ ಜೋ ಕುಲವನೆ ಸವರಿದ ಬಲಶಾಲಿ ಜೋ ಜೋ ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ4 ತ್ರಿಪುರ ಸತಿಯರ ವ್ರತವಳಿದೆ ಜೋ ಜೋ ಚಪಲತನದಿಂ ಹಯವನೇರಿದನೆ ಜೋ ಜೋ ಅಪರಿವಿತದವತಾರದಿಂ ಬಳಲಿ ಬಂದು ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ 5 ಅರಸು ಜಯದೇವಿ ಸಂಕರ್ಷಣನೆ ಜೋ ಜೋ ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ6 ನಾರದಾದಿಗಳೆಲ್ಲ ನರ್ತನದಿ ಪಾಡೆ ಊರ್ವಶಿ ಅಪ್ಸರರು ನೃತ್ಯವನು ಮಾಡೆ ತೋರೆ ಗಂಧರ್ವರು ಗಾನಗಳ ರಚನೆ ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ 7 ಭಕ್ತನಾದ ವಾಯು ಸಹಿತ ಪವಡಿಸಿದೆ ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ 8 ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ9
--------------
ಅಂಬಾಬಾಯಿ
ನೋಡಿರೋ ನೋಡಿರೋ ಸ್ವಾಮಿ ಶ್ರೀಪಾದ ಗೂಢಗುರುತವಾಗ್ಯದ ನಿಜಬೋಧ ಧ್ರುವ ಕಣ್ಣಿನೊಳಗದ ಕಾಣುಗುಡುತಿದೆ ಕಣ್ಣೆ ಕಣ್ಣೆಗೆ ಕಾಣಿಸುತಿದೆ 1 ಝಗಝಗಿಸುತಿದೆ ಥಳಥಳಿಸುತಿದೆ ಬಗೆ ಬಗೆ ಭಾಸುತ ಹೊಳೆಯುತಲಿದೆ 2 ಕೇಳಬರುತದೆ ಹೇಳಗುಡುತದೆ ತಾಳ ಮೃದಂಗವು ಭೋರಿಡುತದೆ 3 ಏನೆಂದ್ಹೇಳಲಿ ಸ್ವಾನಂದ ಲೀಲೆ ಸ್ವಾನುಭವದಸುಖ ಆಲಿಸಿ ಕೇಳಿ 4 ಮಾಯಾಕಾರಗಿದು ಕೈಯಲಿಗೂಡದು ಮಹಿಪತಿ ಸ್ವಾಮಿದಯಕೆ ಒದಗುವದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು ಶ್ರೀ ಸೂರ್ಯದೇವ ಸ್ತೋತ್ರ 88 ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ ಸೂರಿ ಪ್ರಾಪ್ಯ ಪ ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್ ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ ಅಮಯ ದೂರ ಸುಗುಣ ಗಣಾರ್ಣವ ದೇವ ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1 ಮಕರ ಕುಂಡಲವಾನ್ ಕಿರೀಟಿಯೆ ಅರಿದರ ಧಾರಿ ಅವ್ಯಯಾನಂದ ಚಿತ್ ಚಾಮೀಕರ ವಪು ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2 ಹಿಂಕಾರ ಪ್ರಸ್ತಾವ ಆದಿ ನಮೋ ನಮೋ ಉದ್ಗೀಥ ಪ್ರತಿಹಾರೋಪದ್ರವ ನಿಧನ ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3 ಭೂತೇಂದ್ರಿಯ ಕರ್ಣಾದಿಗಳಿಗೆ ದೂರ ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4 ಸೂರ್ಯದೇವನೆ ದಯಾವಂತನೆ ನಮೋ ನಮೋ ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5 ಸೂರ್ಯ ನೀ ಅಹರಹ ಎನ್ನಸರ್ವಪೀಡೆಗಳ್ ಕಳೆದು ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6 ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ ಸೂರ್ಯ ನಿನ್ನ ಪ್ರೀತಿಪಾತ್ರ ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ ಕರುಣದಿ ಎನ್ನನು ಎನ್ನವರನು ಕಾಯೋ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಭೀಮಸೇನನ ಸ್ತ್ರೀವೇಷ ಭೀಮನು ಸರ್ವಜನಾ ಮೋಹಿಸುವಂಥಕಾಮಿನಿ ರೂಪವ ತೊಟ್ಟನು ಪ ಸೋಮ ಸಮಾನನ ತಾಮರಸಾಂಬಕಹೇಮಾಂಬರ ಕಂಠೀಮಣಿ ಗಣ ಸು -ತ್ರಾಮ ಕಾಮಿನಿಯಾ ಮೋಹಿಪ ಅಬಿ -ರಾಮರೂಪ ನಿಸ್ಸೀಮ ಬಲಾಢ್ಯ ಅ.ಪ. ಬಟಕುಚಪಟ ಕರಪುಟದಿಂದ ಹಿಗ್ಗಿಸಿ ತೀಡುತ ಅಂ-ಗುಟ ತುದಿಲೆಳೆದೆಳೆದುಟಿ ರಕ್ತಿಮೆಯನು ನೋಡುತಕುಟಿಲಾಳಕನ್ಯಾವರಿಸುತ ಪಟುಮಾತಾಡುತವಿಟರಿಗೆ ಸ್ಮರಸಂಕಟವನು ಹೃದಯದಲೂಡುತ ಪುಟ್ಟಚಂಡ ಹಾರಿಸಿ ನಟನೆ ಮಾಡುವಾ -ರ್ಭಟಕಂಜಿಹ ವಿಟಪಟಲ ಹಾಂಗಿರಲದುವಟುರಿದ್ದರು ಯತಿ ಮಠಮಂದಿರ ಲಂ -ಪಟವ ಬಿಟ್ಟ ಮಿಟಿಮಿಟಿ ನೋಡುವರೋ 1 ಕರಿಕಲಭಗಮನ ಸೊರಗಿದ ಕಟಿಕಂಠೀರವುವಿಠಲ ನಯನಜತ ಎರಳೆಗಳ್ ಮನೆಯನು ಸೇರವುಸರಸ ಸ್ವರದಿಂದ ಪರಿಭ್ರಮಿಸಿತು ಕಲಕಿರವುಸುರನರವರ ಸುಂದರಿಯರ ಚಲುವಿಕೆ ಮಾರವು ಹೆರಳ್ ಬಂಗಾರವು ಮಲ್ಲಿಗೆ ಸರಗೀ ಸರಹರಳ್ ಕಂಕಣ ಬಳೆ ಸರಳ್ ಬೆರಳುಂಗುರಅರಳ್ ಮಲ್ಲಿಗೆ ಸರ ಕೊರಳ್ ಗಂಧವ ಕಂಡುಮರುಳ್‍ಗೊರಡ ಜನ ಹಗಲಿರುಳು ಧೇನಿಪರೊ 2 ಮೃಗಮದತಿಲಕವು ಮುಗುಳ್ ನಗೆಮೊಗ ಬಿಂಬಾಧರಖಗಯುಗದಂದದಿ ಝಗಝಗಿಸುತಿಹ ಪಯೋಧರಅಘಹರ ರಾಜಗೋಪಗ ಸಖ ಪಾರ್ಥ ಸಹೋದರಬಗೆ ಬಗೆಯಲಿ ಮನದಗ ಅಘಹರನ ಕೃತಾದರಮುಗುಳ್ ಮಲ್ಲಿಗೆ ಸರ ತೆಗೆತೆಗೆದ್ಹಾಕುತಸೊಗಸು ಸುಗುಣರೂಪ ತಗುಬುಗಿಲೆನುತಿರೆಜಗದ ಜನರ ಮನ ಭುಗಿಭುಗಿಲೆನುತಿರೆಬಗೆ ಬಗೆಯಲಿ ಒಂದ್ಹಗಲ್ಯುಗವಾಗೆ 3
--------------
ರಾಜಗೋಪಾಲದಾಸರು