ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತಚತುರ್ದಶಿಯ ದಿನದ ಪ್ರಾರ್ಥನೆ) ಪದ್ಮನಾಭ ಪರಿಪಾಲಿಸು ದಯದಿಂದ ಪದ್ಮಜಾದಿ ವಂದ್ಯ ಪರಮ ದಯಾಳೊ ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ ಸದ್ಮ ವೃತ್ತಿಪದಪದ್ಮವ ತೋರೊ ಪ. ಚಿಂತಿತದಾಯಕ ಸಂತರ ಕುಲದೈವ ಕಂತು ಜನನಿಯೊಡಗೂಡಿ ನೀನು ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು- ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1 ಆದಿ ಮಧ್ಯಾಂತವಿದೂರ ನಿನ್ನಲಿ ಮಹ ದಾದಿ ತತ್ವಗಳೆಲ್ಲ ನಿಂತಿಹವು ಆದಿ ಭೌತಿಕ ಮೊದಲಾದ ತಾಪಗಳನ್ನು ಶ್ರೀದ ನೀ ಬಿಡಿಸಲು ಸದರವಾಗಿಹವು 2 ಒಂದರಿಂದೊಂದಾದರಿಂದ ಮೂರು ಮೂರ್ತಿ ಇಂದಿರೆ ಸಹಿತಾವಿರ್ಭೂತನಾಗಿ ಮುಂದಿನ ಮಹದಾದಿ ತತ್ವವ ನಿರ್ಮಿಸಿ ನಿಂದನಂತಾಸಂತರೂಪನಾದವನೆ 3 ಭವ ಚಕ್ರದೊಳು ತಂದು ನವ ನವ ಕರ್ಮಗಳನೆ ಮಾಡಿಸಿ ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು ನಿತ್ಯ ತೃಪ್ತನಾಗಿರುವಿ 4 ಮಛ್ವಾದ್ಯನಂತವತಾರಗಳನೆ ಮಾಡಿ ಸ್ವೇಚ್ಛೆಯಿಂದ ಸುಜನರ ಸಲಹಿ ಕುಚ್ಛಿತ ಜನರಿಗೆ ತುಚ್ಛಗತಿಯನೀವೆ ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5 ನಾನಾವತಾರದಿ ನಂಬಿದ ಸುರರಿಗೆ ಆನಂದವಿತ್ತು ರಕ್ಷಿಪೆ ಕರುಣದಿ ದಾನವರಿಗೆ ಅಧ:ಸ್ಥಾನವ ನೀಡುವಿ ಮಾನವರನು ಮಧ್ಯಗತರ ಮಾಡಿಸುವಿ 6 ಹಿಂದೆ ಮುಂದಿನ ಭವದಂದವ ತಿಳಿಯದ ಮಂದಾಗ್ರೇಸರ ನಾನಾದೆಂಬುದನು ಅಂಧಕರಾರಣ್ಯದಿಂದ ಮೂಢನಾದಂ ದಿಂದ ಬಿನ್ನೈಪೆನು ಇಂದಿರಾಧವನೆ 7 ಮಾಡುವ ಕರ್ಮವು ನೋಡುವ ವಿಷಯಗ- ಳಾಡುವ ಮಾತು ಬೇಡುವ ಸೌಖ್ಯವು ನೀಡುವ ದಾನವೋಲ್ಯಾಡುವ ಚರ್ಯವ ನೋಡಲು ತಾಮಸ ಪ್ರಹುಡನಾಗಿಹೆನು 8 ಆದರು ನಿನ್ನಯ ಪಾದಾರವಿಂದ ವಿ- ನೋದ ಕಥಾಮೃತ ಪಾನದೊಳು ಸ್ವಾದ ಲೇಶದಾದರ ತೋರ್ಪದ- ನಾದಿ ಮೂರುತಿ ನೀನೆ ತಿಳಿಸಬೇಕದನೂ 9 ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ ಪದವ ಕಾಣುವೆನೆನುತೊದರುವೆನು ಹೃದಯ ಮಂಟಪದಿ ನೀ ಹುದುಗಿರುವುದರಿಂದ ಕದವ ತೆರೆದು ತೋರೊ ವಿಧಿಭವವಿನುತಾ 10 ಕನ್ನೆ ಸುಶೀಲೆಯ ಕರಸೂತ್ರ ರೂಪದ ನಿನ್ನ ತಿಳಿಯದೆ ಕೌಂಡಿಣ್ಯನಂದು ಮನ್ನಿಸದಿರೆ ಮದ ಮೋಹಗಳೋಡಿಸಿ ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11 ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು- ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12 ಅದು ಕಾರಣದಿಂದ ಪದುಮನಾಭ ನಿನ್ನ ಪದ ಕಮಲಗಳಲಿ ರತಿಯನಿತ್ತು ಸದರದಿ ಸಲಹಯ್ಯ ವಿಧುಶೇಖರಾರ್ಚಿತ ಮದನನಯ್ಯ ಮರುದಾದಿ ವಂದಿತನೆ 13 ದೋಷರಾಶಿಗವಕಾಶನಾದರೂ ಯೆನ್ನ ಶ್ರೀಶ ನಿನ್ನ ದಾಸದಾಸನೆಂದು ಘೋಷವಾದುದರಿಂದ ಪೋಷಿಸಬೇಕಯ್ಯ ಶೇಷಗಿರೀಶ ಸರ್ವೇಶ ನೀ ದಯದಿ 14
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳಿರೋ ಕೇಳಿರೋ ಆಲಿಸಿ ಜನರು | ಕಲಿಯುಗದೊಳಗ ಒಡಿಯ ನಾಟವನು ಪ ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ | ಹುಲ್ಲು ಕಲ್ಲು ದೈವಕ ಎರಗಿ ನಡೆವರು | ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು | ಅಲ್ಲ-ಹುದೆಂಬುದು ಬಲ್ಲವರಾರು 1 ಸಾಧು ಸಂಗಕ ಕಾಲು ಏಳುವು ನೋಡಿ | ಸಾಧಿಸಿ ದುರ್ಜನರಾ ನೆರಿಯ ಸೇರುವರು | ಮಾಧವ ನಾಮ ಉಣ್ಣಲು ಮುಖರೋಗ | ಭೂದೇವಿ ನಿಸ್ಸಾರವಾದಳು ನೋಡಿ2 ನೀಚರಿಗುದ್ಯೋಗ ಊಚರಿಗಿಲ್ಲ | ಆಚಾರ ಸದ್ಗುಣ ಆಡವಿ ಸೇರಿದವು | ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ | ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ3 ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು | ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ | ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ | ತಲಿ ತಲಿಗಿನ್ನು ನಾಯಕರಾಗಿ ಇರಲು 4 ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ | ಕುಲ ಅನ್ಯ ಇಲ್ಲದ ರಾಜೇಶನಾ | ಕಾಲಿಲಿ ಸರ್ವ ಸಂಕರ ವಾಗುತಿರಲು | ಹೊಳೆವನು ಗುರುಮಹಿಪತಿ ಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾಮ ಮುದ್ರೆಯ ಧರಿಸೋ ಶ್ರೀಹರಿಯ ದಿವ್ಯ ಪ ನಾಮ ಮುದ್ರೆಯ ಧರಿಸೆ ಆ ಯಮನಾಳುಗಳ ಭೀಮವಿಕ್ರಮದ ಭಯ ಲೇಶವಿಲ್ಲವೋ ಅ.ಪ ಚಕ್ರದೊಳು ಹೀಂಕಾರನಾಮಕನಾಗಿ ನಕ್ರವೈರಿಯ ಕಾಯ್ವ ತಮವನ್ನು ಹರಿಸಿ ವಿಕ್ರಮ ಕೃಧ್ಧೋಲ್ಕ ತಮಲೋಕದೊಳು ಇದ್ದು ಚಕ್ರಧರಿಸದ ಜೀವರ ಕ್ರೂರತನದಲಿ ಶಿಕ್ಷಿಪಾ 1 ಶಂಕಿಸುವವನ ಪಾಪಪಂಕದೊಳಿಟ್ಟು ಮಂಕುಕವಿಸಿ ಮಹೋಲ್ಕ ಶಿಕ್ಷಿಪನಯ್ಯ 2 ಗದೆಯೊಳು ನಿಧನನಾಮಕ ಹರಿಯು ತಾನಿದ್ದೂ ಮುದದಿ ಮರೆಯುವವರನಾ ವೀರೋಲ್ಕ ತಾ ನಿತ್ಯ 3 ಪದುಮನೊಳು ಪ್ರಸ್ತಾವನಾಮದಿ ಪದ್ಮರಹಿತ ಮಾನವರ ದ್ಯುಲ್ಕರೂಪದಿ ನಿತ್ಯ 4 ನಾರಾಯಣ ಮುದ್ರೆಯೊಳು ಉದ್ಗೀಥನು ಹರಿಭಕುತರ ಅಂಧತಾಮಿಶ್ರ ಕಳೆವನು ದುರುಳ ಕಲ್ಯಾದ್ಯರ ಸಹಸ್ರೋಲ್ಕ ರೂಪದಿ ಕ್ರೂರತನದಿ ಅಂಧಂತಮದೊಳಿಡುವನು 5 ನೇಮದಿ ದ್ವಾದಶ ಊಧ್ರ್ವಪುಂಡ್ರಗಳು ಕಮಲ ತುಲಸಿಮಣಿಮಾಲೆಗಳ ಕೊರಳೊಳು ಯಮನಾಳುಗಳ ಭಯ ಲೇಶವಿಲ್ಲೆಂದಿಗೂ 6 ಪಂಚ ಪಂಚ ಕರಣಗಳ ಕಾರ್ಯ ಒಪ್ಪಿಸೇ ಪಂಚನರಕಬಾಧೆ ಕಿಂಚಿತ್ತ್ತಾದರು ಇಲ್ಲ ಪಂಚಾನನನುತ ಶ್ರೀ ವೇಂಕಟೇಶನ ದಿವÀ್ಯ7
--------------
ಉರಗಾದ್ರಿವಾಸವಿಠಲದಾಸರು
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ಹರಿಯೆನ್ನೋ ಹರಿಯೆನ್ನೋ ಹರಿಯೆನ್ನೋ ಖೋಡಿ ಹರಿಯದಾಸರ ಸಿರಿಸಂಪದ ನೋಡಿ ಪ ಎರವಿನ ಸಿರಿಗೆ ನೀ ಮರುಳಾದಡಿ ಹರಿಯೆಂದು ನುಡಿಲಿಕ್ಕೆ ನೀನಗೇನು ಧಾಡಿ ಧರೆಯೊಳಾರಿಲ್ಲ್ಹರಿದಾಸರ ಜೋಡಿ ಮರುಳ ಯಮದೂತರಂಜಿ ಹೋಗುವರೋಡಿ 1 ಭವಚಕ್ರದೊಳುಬಿದ್ದು ಬೆಂಡಾದೆ ಕಾಗಿ ಅವನಿಸುಖ ನೀನಿನ್ನು ತಿಳಿವಲ್ಲಿ ಗೂಗಿ ಭವಹರನರ್ಚಿಸಿ ನೋಡೋ ದೃಢಮಾಗಿ ಭವತಾಪ ನಿನಗೆಂದಿಗಿರದೋ ನಿಜವಾಗಿ 2 ಮತಿಶೂನ್ಯನಾಗಧೋಗತಿ ಕಾಣಬೇಡೋ ಮತಿಯಿಂದ ನಿಜಸ್ಥಿತಿ ವಿಚಾರಮಾಡೋ ಕೃತಕೃತ್ಯರೆನಿಪ ಹರಿದಾಸರೊಳಾಡೋ ಪತಿತ ಶ್ರೀರಾಮನರಸಿ ಮುಕ್ತಿಯ ಕೂಡೋ 3
--------------
ರಾಮದಾಸರು