ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೇತ್ರದರ್ಶನ ಅ. ಕಂಚಿ ಕರಿಗಿರಿವಾಸ ವರದರಾಜ ಕರಿಗಿರಿವಾಸ ಪ ದುರಿತ ವಿನಾಶನೆ ಸುರಮುನಿ ಪೋಷನೆ ಭವರೋಗ ನಾಶನೆ ಅ.ಪ ರಾಜನೆಂಬೊ ಬಿರುದು ಪೊತ್ತಿಹ ದೇವ 1 ಮಾಯೆಯ ಬಿಡಿಸೊ ನಿನ್ನಲಿ ಎನಗೆ ಮೋಹವ ನಿಲಿಸೊ ಪಾದಧ್ಯಾನವನಿತ್ತು ಕಾಯೊ ವರದರಾಜ 2 ಚತುರಹಸ್ತದಲೀ ಕೈಪಿಡಿದು ದಿವ್ಯವಾದ ಶಂಖಚಕ್ರಗದೆಯಲಿ ನಿಮ್ಮ ಪಾದವ ಸೇರಿಸು ಎನ್ನ ಚಿತ್ತಜಜನಕ 3 ಹಾ ಕೃಷ್ಣ ಎಂದು ದ್ರೌಪದಿ ಕರೆಯೆ ಮನಕೆ ನೀತಂದು ಅಕ್ಷಯ ಮಾಡಿದೆ ಪಕ್ಷಿವಾಹನ ಪಾಂಡವಪಕ್ಷ ಶ್ರೀಕೃಷ್ಣ 4 ಇನ್ನು ನಾ ಜನಿಸಲಾರೆನೊ ಹೀನಜನ್ಮದಿ ಮನ್ನಿಸಿ ರಕ್ಷಿಸೊ ಎನ್ನ ವರದರಾಜ5 ಭವಬಿಸಲಿನಲಿ ಬಳಲಿ ಬಂದೆ ತಾಪತ್ರಯದಲ್ಲಿ ನಿಮ್ಮ ಚರಣ ಪಂಕಜವೆಂಬೊ ಆತಪತ್ರದ ನೆರಳ ತಾಪ ದೂರ ಮಾಡಿಸೊ ದೇವ 6 ನಾಮಾಡಿದಂಥ ಪಾಪಗಳೆಲ್ಲ ಸಾವಿರ [ಅ]ನಂತ ಎಣಿಸಿ ನೋಡಲು ಏನೂ ದಾರಿಯ ಕಾಣೆನು [ಎನ್ನ] ಸರ್ವಾಪರಾಧವ ಕ್ಷಮಿಸಿ ರಕ್ಷಿಸೊ ದೇವ 7 ವಿಂದ್ಯಾರಣ್ಯದಲಿ ಭಕ್ತರು ಕರೆಯೆ ಬಂದೆ ಬೇಗದಲಿ ಇಂದಿರೆ ಸಹಿತಾಲೆ ತೀರ್ಥವ ಗ್ರಹಿಸಿ ಭಕ್ತರ ಕರೆ ತಂದು ಕರಿಗಿರಿಯಲಿನಿಂದ ವರದರಾಜ ಕರಿಗಿರಿವಾಸ 8
--------------
ಯದುಗಿರಿಯಮ್ಮ
ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ ದಿಕ್ಕುಗಳನು ಬೆಳಗುವ ಸುಕೀರಿಟವ ನಿಕ್ಕಿಹ ಮಾಣಿಕದೋಲೆಯನೂ ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ 1 ಕಂಬು ಚಕ್ರಗದೆ ಪದುಮವ ಪಿಡಿದು ಪೀ ತಾಂಬರದಂಗಿಯ ಧರಿಸಿಕೊಂಡೂ ತುಂಬಿದ ವಕ್ಷದಿ ರಮೆ ಕೌಸ್ತುಭದಿಂ ಗಂಭೀರಾರ್ಣವನಾದ ಚೆನ್ನಿಗನ 2 ಸುರರೆಲ್ಲರು ಪೂಜಿಸುವ ಚರಣದೊಳು ಕಿರುಗೆಜ್ಜೆ ಪೆಂಡೆಯವಿಟ್ಟವನಾ ವರವೈಕುಂಠ ವೇಲಾಪುರದರಸನ ಶರಣ ವತ್ಸಲನಾದ ಕರುಣಾಂಬುಧಿಯಾ 3
--------------
ಬೇಲೂರು ವೈಕುಂಠದಾಸರು
ಭವ ದಾಂಟಲಿಕಿದುಸಾರಾ ಪ ಅಚ್ಯುತಾನಂತ ಗೋವಿಂದ ಕೇಶವ ಎನ್ನಿ ಸಚ್ಚಿದಾನಂದ ಶ್ರೀ ಕೃಷ್ಣ ನೆನ್ನಿ ಹೆಚ್ಚಿದ ದುರುಳದಾನವರ ಸಂಹರಿಸಿದ ಮುಚುಕುಂದ ವರದಾಯಕ ನೆನ್ನಿ 1 ನೀಲ ಮೇಘ ನಿಭಾಂಗ ರೂಪನು ಎನ್ನಿ ಕಾಳಿಯ ತುಳಿದ ಗೋಪಲ ನೆನ್ನಿ ಪಾಲು ಮೊಸರು ಬೆಣ್ಣೆಗಳ್ಳನಿವನುಎನ್ನಿ ಭೂಲಲನೆಯ ಗಂಡ ನೀತ ನೆನ್ನಿ 2 ಶಂಖ ಚಕ್ರಗದೆ ಪದ್ಮಧರನು ಎನ್ನಿ ಮುರ ವೈರಿಯೆನ್ನಿ ಪಂಕಜ ವದನ ಕಸ್ತೂರಿ ತಿಲಕನೆನ್ನಿ ಡೊಂಕ ತಿದ್ದಿದ ಕುಬುಜೆಯನೀತನೆನ್ನಿ 3 ರಾಣಿಯ ನೊಯ್ದ ರಾವಣನ ಕೊಂದವನೆನ್ನಿ ಬಾಣಾಸುರನ ತೋಳ ತರಿದವನೆನ್ನಿ ವೇಣುನಾದ ಪ್ರಿಯ ಶ್ರೀರಂಗ ನೆನ್ನಿ 4 ನಾಮವೇಗತಿ ಎನ್ನಿ ನಾಮವೇ ಮತಿ ಎನ್ನಿ ನಾಮವೇ ಪರಕೆ ಸಾಧನವು ಎನ್ನಿ ಪ್ರೇಮದಿಂದಲಿ ರಸನೆಯೊಳು ಲಕ್ಷ್ಮೀಶನ ನಾಮ ಸ್ಮರಣೆಯನು ನುಡಿನುಡಿಗೆನ್ನಿ 5
--------------
ಕವಿ ಪರಮದೇವದಾಸರು
ರುದ್ರದೇವರು ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ಪ ಮಾರಹರನೆ ಮನ್ಮಥನ ವೈರಿಯೆ ಮನ- ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ ನೆತ್ತಿಲಿ ಕೆಂಜೆಡೆ ಸುತ್ತಿಹುದು ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು ಉತ್ತಮ ಡಮರು ತ್ರಿಶೂಲ ಪಿಡಿವುದಿದು 1 ನೊಸಲಲಿ ಕಸ್ತೂರಿ ತಿಲಕವನಿಡದಲೆ ಭಸುಮವ ಲೇಪಿಸುವುದು ತರವೆ ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ ಎಸೆವ ಕಪಾಲ ಪಿಡಿದು ಬೇಡುವದಿದು 2 ದುಂಡು ಮುತ್ತಿನ ಹಾರ ಪದಕಗಳಿರುತಿರೆ ರುಂಡಮಾಲೆಯ ಕೊರಳೊಳು ತರವೆ ತಂಡ ತಂಡ ಪರಮಾನ್ನ ಭಕ್ಷಗಳಿರೆ ಉಂಡು ತೇಗದೇ ವಿಷಪಾನ ಮಾಡುವದಿದು3 ಭರ್ಜರಿ ಪೀತಾಂಬರ ಉಡುವುದು ಬಿಟ್ಟು ಕರಿಯ ಚರ್ಮನುಡುವುದು ತರವೆ ಪರಿ ರತ್ನಾಭರಣಗಳಿರುತಿರೆ ಉರಗಗಳಿಂದಲಂಕೃತನಾಗಿರುವದು 4 ಭೃತ್ಯರು ಸೇವೆಗೆ ಬೇಕಾದವರಿರೆ ಮತ್ತೆ ಪಿಶಾಚ ಗಣಗಳೇತಕೆ ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ ಎತ್ತನೇರಿ ಚರಿಸುವುದುಚಿತವೆ ಶಂಭೊ 5 ಸಿರದಲಿ ಗಂಗೆಯು ಸ್ಥಿರವಾಗಿರುತಿರೆ ಪರ್ವತರಾಜಕುವರಿಯೇತಕೆ ಅರಮನೆ ವಾಸಕೆ ಯೋಗ್ಯವಾಗಿರುತಿರೆ ಗಿರಿ ಕೈಲಾಸ ಪರ್ವತದಿ ವಾಸಿಸುವದು 6 ಭಕ್ತರು ಭಕುತಿಲಿ ಪಾಡಿ ಕೊಂಡಾಡಲು ನೃತ್ಯವ ಮಾಡುತ ಹರುಷದಲಿ ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು ಪತ್ನಿಗೆ ಉಪದೇಶ ಮಾಡುವದಿದು 7
--------------
ನಿಡಗುರುಕಿ ಜೀವೂಬಾಯಿ
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಶರಣು ಶರಣುಪರಮಪುರುಷಶರಣು ಭಯಶರ ಖಂಡನಶರಣುಸಿರಿವಿಧಿಮರುತ ಪೂಜಿತಶರಣು ವೆಂಕಟನಾಯಕ ಪ.ಭಾಸಿತ ತಟಿತಮಕರಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷಸ್ಥಿತಿಲಯಶೀಲನೆತೋಷಮಂದ ಸುಹಾಸವದನನೆಶೇಷಗಿರೀಶ ನಮೋ ಹರೆ 1ಶಂಖ ಚಕ್ರಗದೆ ಪದುಮ ವರಾಭಯಕಂಕಣಕರ ರಾಜಿತಕುಂಕುಮಮೃಗಮದತಿಲಕಧರಾತಂಕಕುಂಭಿಮೃಗಾಧಿಪಕಿಂಕರಾನತ ರಕ್ಷಕರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ 2ಜನನ ಮೃತ್ಯುವಿದೂರಅಚ್ಯುತಮುನಿಮನಾಲಯಮಾಧವಕನಕನೇತ್ರವಿದಾರಿ ಪೋತ್ರ್ಯಾಂಗನೆ ವಿಮಲಗುಣ ಪೂರ್ಣನೆದನುಜನಿಕರಾಟವಿ ದಾವಾನಲಸನಕಸನಂದನ ಸ್ತುತಿಪ್ರಿಯಅನವರತವರಸ್ವಾಮಿಪುಷ್ಕರಸನ್ನಿದ ಪ್ರಸನ್ವೆಂಕಟೇಶನೆ 3
--------------
ಪ್ರಸನ್ನವೆಂಕಟದಾಸರು