ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ. ಮಂಗಳಂ ಶ್ರೀ ಭೂಮಿದೇವಿಯ ರಮಣಗೆ ಮಂಗಳಂ ಸದ್ಗುಣಗಣಪೂರ್ಣಗೆ ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ ಮಂಗಳಂ ಶ್ರೀ ವೇಂಕಟಾಧೀಶಗೆ 1 ವಂದಾರು ಸುರವೃಂದ ರುಚಿರಮಣಿಮಯ ಮಕುಟ ಸಂದೋಹ ಸಂಘಟಿತಪದಪೀಠಗೆ ಇಂದಿರಾಕರಕಮಲರಂಜಿತ ಧ್ವಜವಜ್ರ ಸಂದಿಪ್ಪ ಪಾದಾದಿ ಶುಭರೇಖಗೆ 2 ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ ಭವ್ಯ ಮಂಗಳದಾಯಿ ಭಯಹಾರಿಗೆ ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ ಸೇವ್ಯ ಗಂಗಾಜನಕ ಶ್ರೀಚರಣಗೆ 3 ವರಕನಕವನಯುತ ಉರುನಿತಂಬದ್ವಯಗೆ ಸರಸಕೇಳೀವಾಸಸಜ್ಜಘನಕೆ ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ- ತ್ಸರಸಿಜಾಸನಜನಿತ ಶುಭನಾಭಿಗೆ 4 ಭುವನ ಪೂರಿತ ವಳಿತ್ರಯರಾಜದುದರಗೆ ವಿವಿಧ ಕುಸುಮಾಕಲಿತ ಸುಮಮಾಲಿಗೆ ಕೌಸ್ತುಭ ಶ್ರೀವತ್ಸ ನವಹಾರಕೃತ ರಮಾಶ್ರಿತ ವಕ್ಷಕೆ 5 ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ ಶತ್ರುಭೀಷಣ ಘನಧ್ವನಿ ಶಂಖಕೆ ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ ಶ್ರಿತಜನ ಭಯಹಾರಿ ವರಪದ್ಮಕ್ಕೆ 6 ಕಂದರ ವದನಕೆ ನಾಸಿಕ ಕಾಲ ಸನ್ಮುಖಕಮಲಕೆ ಅರುವಾರಿಜನೇತ್ರ ಶೋಭನ ಭ್ರೂಯುಗಳ ವರ ಫಾಲತಿಲಕ ಕುಂತಳರಾಯಗೆ 7 ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ ವಿಮಲದರ್ಪಣ ಭಾಸ ಗಂಡಯುಗಕೆ ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ ರಮಣೀಯ ಗುಣರಚಿತ ವರ ಮಕುಟಕೆ 8 ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ ಮದನಮದಗಜಶೀಲ ಲಾವಣ್ಯಕೆ ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ ಪದ ಹಯವದನ ವೆಂಕಟರಮಣಗೆ 9
--------------
ವಾದಿರಾಜ
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು
ಎಂಥ ವಿಕ್ರಮಳೆ ನೀನುಎಂಥ ವಿಕ್ರಮಳೆ ನಿನಗೆಣೆ ಯಾರು ಶ್ರೀ ಲಕ್ಷ್ಮೀ-ಕಾಂತ ರೂಪದಿ ಕೊಂದೆ ಮಧುಕೈಟಭರ ದೇವಿಪಹರಿಕಿವಿಯಲಿ ಅವತರಿಸಿ ಮಧು ಕೈಟಭರ-ವರೆನಿಸಿ ಪಡೆಯೆ ವಿಧಿಯಿಂ ವರವಅರಿದುವಿಷ್ಣುವಿನಿಂದ ಮರಣ ಇವರಿಗೆಂದುಸ್ಮರಣೆಯ ಮಾಡಿದ ದೇವಿ ಪಾದಪಂಕಜಪರಮಮಂಗಳ ವಿಷ್ಣು ಎಬ್ಬಿಸು ಈ ಕ್ಷಣಹರಣವನೆ ಕಾಯಲಿ ಮೂರ್ವರು ನಿಮ್ಮಚರಣವ ನಂಬಿರಲಿ ಎತ್ತಿದಳಾಗಅರಳಿದವು ಕಣ್ಣು ಉಸಿರಾಡಿತು ಮೂಗಿನಲಿ1ಎದ್ದವನಚ್ಯುತ ಬ್ರಹ್ಮ ಏಳನೇ ಶರಧಿಯೊಳೆದ್ದ ಬಡಬನಂದದಲಿ ಮೃತ್ಯುವಗೆದ್ದ ಮೃತ್ಯುವಿನಂತಾಗಲು ಸಿಡಿಲಿನಮುದ್ದೆಯಂದದಿ ಕಣ್ಣ ಕಿಡಿಯುಕ್ಕೆ ಔಡಗಿ-ದೆದ್ದು ಚಕ್ರಕೆ ಕೈಯನಿಕ್ಕುತ ಹೊಯ್ದನುಅದ್ದಲು ಆ ಮಧುವ ಕೈಟಭನನ್ನುಒದ್ದು ಹಾಕಿದ ಶಿರವ ಇಬ್ಬರ ಕೂಡೆಬಿದ್ದರು ಮಹಾಹವ ಮೂರ್ವರ ಬಹು-ಯುದ್ಧವ ಹೇಳುವುದೇನು ಆ ಬಹು ರೌದ್ರವ2ಆದುದು ಪಂಚ ಸಹಸ್ರ ವರುಷ ಯುದ್ಧತೊಯ್ದರು ರಕ್ತದಿ ಕ್ರೋಧದುಬ್ಬಟ್ಟೆಯಿಂದಕಾದು ಕರಗಿದುದುಕವು ವಿಷ್ಣು ಬೇಸರ್ತ-ಮದ ಬೇಡಿರಿ ವರವನು ನೀಬೇಡೆನೆ ಕೊಟ್ಟ-ರಾದರೆ ಚಕ್ರದಿ ತಲೆ ಹರಿಯಲೆಂದುಛೇದಿಸಿದನು ಶಿರವ ಮೇಧಸು ಕೊಬ್ಬುಮೇದಿನಿಯಾದಿರವ ಹೊಗಳಿದ ಬ್ರಹ್ಮಮಾಧವನ ಸ್ತೋತ್ರವ ತಾನೆಯಾದಬೋಧಚಿದಾನಂದ ಬಗಳಾ ಚಾರಿತ್ರವ3
--------------
ಚಿದಾನಂದ ಅವಧೂತರು
ಸುಪುತ್ರನು ಎಂಬುವನಿವನುಸುಪುತ್ರನನು ಹೇಳುವೆ ನಾನುಪತಂದೆ ತಾಯಿಗಳ ಪೂಜಿಸುವಬಂಧುಗಳಿಗೆ ಬಹು ಪ್ರಿಯನಾಗಿ ಇರುವಎಂದಿಗೂ ಕೆಟ್ಟದ್ದ ನುಡಿಯ ಆವ-ಬಂದವರಿಗೆಲ್ಲ ಅನ್ನವ ಕೊಡುವ1ಕುಲದ ಆಚಾರವ ತಪ್ಪಿಸನುಹಲವು ವ್ರತಗಳನವ ತಾ ಬಿಡನುಬಲು ತಿಳುವಳಿಕೆಯನು ತಿಳಿದಿಹನುನೆಲೆಯಿಲ್ಲದ ತಪಮಾಡುವನು2ಅಣ್ಣ ಅತ್ತಿಗೆಗೆ ಉತ್ತರಕೊಡನುಪುಣ್ಯ ಕಥೆಯನು ಕೇಳ್ವುದ ಬಿಡನುತನ್ನ ದೇಹವ ಪೋಷಣೆ ಮಾಡನುಭಿನ್ನ ಬುದ್ಧಿಯನೆಂದಿಗು ತೋರನು3ತತ್ವ ವಿಚಾರವೆಂಬುದೆ ಜೀವನಿತ್ಯಅನಿತ್ಯವ ತಿಳಿದು ಅವನೀವಸತ್ಪುರುಷರೊಳು ಒಡನಾಡುವಎಲ್ಲಮಿಥ್ಯೆಎಂದರಿವ4ಸಂಶಯ ಸಂಕಲ್ಪನೀಗಿಧ್ವಂಸ ಮಾಡಿ ವಾಸನೆಯೆಲ್ಲವಶಿಂಶುಮಾರದ ಚಕ್ರಕೆ ಹೋಗಿಹಂಸ ಚಿದಾನಂದ ಗುರುವಾಗಿ5
--------------
ಚಿದಾನಂದ ಅವಧೂತರು