ಹಣವೆನಲು ಹಣವಲ್ಲ ಹಣವಿಲ್ಲದವರಿಲ್ಲ ಪ
ಗಣಿಸಲು ಮಹಾತ್ಮರೆ ಹಣವಂತರಯ್ಯ ಅ.ಪ
ಹಣವು ವಿದ್ಯೆಯು ತಪಸು ಊಂಛ ವೃತ್ತಿಗಳು ಬ್ರಾ-
ಹ್ಮಣಗೆ ಕ್ಷತ್ರಿಯರಿಂಗೆ ಶೌರ್ಯಾದಿಗಳ್
ಘನಚಮತ್ಕøತಿ ಯುಕ್ತಿಗಳು ವೈಶ್ಯರಿಗೆ ಶೂದ್ರ
ಜನಕೆ ಭೂಪರಿಚರ್ಯ ಕೃಷ್ಯಾದಿಗಳೆ ಹಣವು 1
ಸಟೆ ಕಪಟ ಬಾಯಬಡುಕತನ
ತಸ್ಕರ ಅಧರ್ಮಗಳಿಂದಲಿ
ಘಾಸಿಯಿಂ ಗಳಿಸಿರುವ ಲೇಶವಾದರು ಪುಣ್ಯ-
ರಾಶಿಯನು ಕೆಡಿಸದೇ ಲೇಸು ಮಾಡುವದೇ 2
ಅತ್ಯಾಸೆ ಪಿಶುನತೆಯು ತಾಮಸರಿಗೆ
ಸತ್ಯ ಸಂಕಲ್ಪ ಗುರುರಾಮ ವಿಠಲನ ಸ-
ರ್ವತ್ರ ಚಿಂತಿಸುವವಗೆ ಕೈತುಂಬ ಹಣವೂ 3