ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ
ಕಾಲಕರ್ಮವಿದೂರಪಾಪನಾಶ ಪ
ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ
ವರ ಪರಂಜ್ಯೋತಿ ರೂಪಾತ್ಮನೇ
ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ
ಶರಣು ಜನಸುರಧೇನು ನಿಸ್ಸಂಗನೇ 1
ಉಮೆಯರಸ ಪಂಚವದನ ನಿರ್ಮಲನೆ
ವಿಮಲತರ ಗಂಗಾಜೂಟಧರನೇ
ಅಮಿತಬಲ ವೃಷಭವಾಹನನೆ ಶಾಶ್ವತನೆ
ಕಮಲ ಪಿತ ಸುತ ಹರನೇ ಶಿವರೂಪನೇ 2
ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ
ಕರದಿ ಡಮರುಗಧರನೇ ಶೂಲ ಪಾಣಿ
ಮೆರೆವ ನಾಗಾಭರಣ ಗಿರಿಜೆವರ ಯೋಗೀಶ
ಮೂರ್ತಿ ಶ್ರೀ ಶಂಭು ಶಂಕರನೆ 3