ಕರುಣದಿ ಎನ್ನ ಪೊರಿಯೇ
ತೊರಮ್ಮ ಶಿರಿಯೇ ಪ
ಚರಣಯುಗಕೆ ನಾ ಶರಣು ಮಾಡಿದೆ ದೇವೀ ಅ.ಪ
ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ
ಮಾರಾರಿ ಮುಖಸುರ ಸಂತ್ರಾಣಿ
ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ
ದೂರ ನೋಡದೆ ಪೊರಿಭಾರ ನಿನ್ನದು ತಾಯಿ 1
ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ
ಕಷ್ಟ ದಾರಿದ್ರ್ಯ ದುಃಖ ಹಾರಿಣೀ
ದುಷ್ಟರ ಸಂಗದಿ ಕೆಟ್ಟಿಹ ಎನ್ನನು
ಥಟ್ಟನೆ ಕರುಣಾದೃಷ್ಟಿಲಿ ನೋಡಿ 2
ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ
ಸೀತೆ ಸತ್ರಾಜಿತನ ಪುತ್ರಿ
ದಾತ ಗುರುಜಗನ್ನಾಥವಿಠಲನ
ನೀತ ಸತಿಯೆ ಎನ್ನಮಾತೆ ವಿಖ್ಯಾತೇ 3