ಪಾಲಿಸೈಯಪಾರ ಮಹಿಮ ಪತಿತ ಪಾವನ ಪ.
ನೀಲ ಎನ್ನ ಅ.ಪ.
ಇಂದಿರಾ ಮನೋಹರ ಆನಂದ ಮೂರುತಿಯೆ ನಿನ್ನ
ವಂದಿಸಿ ಬೇಡುವ ಎನಗೆ ಸಂದರುಶನವೀಯ ರಾಯ
ತಂದೆ ಮುಕುಂದ ಮನ್ನಿಸೆಲೊ ಕಂದನಾದೆನ್ನ ಮರೆಯದೆ
ಬಂದು ನಿಂದು ಮುಖವ ತೋರೊ ಸುಂದರ ಅರವಿಂದನಯನ 1
ತಾತನಾಗಿ ಎನ್ನೊಳೊಂದ ಮಾತನಾಡದಿರುವರೇನೊ
ನಾಥ ನೀನೇ ಕಾಯದಿರಲು ಖ್ಯಾತಿವಂತರನ್ನು ಕಾಣೆ
ಪರಾಕು 2
ವಾಸುದೇವ ಕೈಯ ಬರದೆ
ದೋಷವ ನಾಶಮಾಡಿ ನಿನ್ನ ದಾಸನೆಂದೆನಿಸೊ ನಿನ್ನ
ಬೇಸರಿಸದೆ ಶೇಷಗಿರಿವಾಸ ವೆಂಕಟೇಶ ಪೊರೆಯೊ 3