ರಾಮನ ನಾಮವೆ ನಾನಾಕಾರ ಈ
ನಾಮವನುಳಿದರೆ ಶೂನ್ಯಾಕಾರ ಪ
ಕಾಮಿಸಿ ಭಜಿಸಿರೆ ಆನಂದಕರ
ರಾಮಾ ರಾಮಾ ಜೈ ಜೈ ರಾಮಅ.ಪ
ಹಾಡುವ ಭಕ್ತರ ಅನುಮತದಲ್ಲು
ಬೀಡಲಿ ಮೊರೆವ ಶೀಲೆಯರಲ್ಲು
ಸೂಡಿದೆ ನಿನ್ನಯ ರಾಮಾಕಾರ
ರಾಮಾ ರಾಮಾ ಜೈ ಜೈ ರಾಮ 1
ಹೂ ಗಿಡ ಬಳ್ಳಿಗಳಲ್ಲೂ ರಾಮ
ಖಗಮಿಗಗಳ ದನಿ ರಾಮನ ನಾಮ
ರಾಗದಿ ನೋಡಿದರೆಲ್ಲೂ ರಾಮ
ರಾಮಾ ರಾಮಾ ಜೈ ಜೈ ರಾಮ 2
ಪೂಜೆಯ ಹೂವಲು ರಾಮ ರಾಮ
ತೇಜದ ಗಂಧದ ಪರಿಮಳ ರಾಮ
ರಾಜಿಪ ದೇಗುಲವೆಲ್ಲ ರಾಮ
ರಾಮಾ ರಾಮಾ ಜೈ ಜೈ ರಾಮ3
ಜಾಜಿಪುರೀಶನ ಪಾವನ ನಾವi
ಸಾಜದಿ ನುತಿಸಿರೊ ರಾಮ ರಾಮ 4