ವಿಠ್ಠಲ ಪಾಂಡುರಂಗ ಬಂದೆನೊ ನಿನ್ನ ಬಳಿಗೆ ನಾನು ಪ
ಹರಿಪೂಜೆ ಮರದಿಹುದು ಧರೆಯೊಳು ನರಪೂಜೆ ಪಿರಿದಿಹುದು
ಹರಿಜನ ಪರಿಯರೆದು ವಿಷಯಕೆ ಹರಿವುದು ಮನಸರಿದು
ದುರಿತ ಜಲಧಿಯೊಳು ನರಜಲಚರಂಗಳು
ಮರೆದು ನಿನ್ನ ಸದಾ ಸುರಿವವು ಭವಸುಖ1
ಒಡಲಿಗೆ ಇಡುತಿಹರು ಷಡುರಸದನ್ನ ಮಡದಿಸುತರು
ನುಡಿದುದೆ ಕೊಡುತಿಹರು ಪೊಡವಿಯೊಳ್ಳಡುಸುಖ ಬಡುತಿಹರು
ವಡನೆ ಹರಿಗಿಡದೆ ಜಡಮತಿಯೆನಿಪರು 2
ಸೊಕ್ಕು ಸೋಂಕಿತೆನಗೆ ಕಕ್ಕಸಬಡುತಿಹೆನಡಿಗಡಿಗೆ
ಮಕ್ಕಳ ಮೋಹದೊಳಿಗೆ ಶಿಕ್ಕಿ ನಾ ಬಳಲುವೆ ಕಡೆವರೆಗೆ
ಧಿಕ್ಕಾರವೀ ಜನ್ಮ ನರಸಿಂಹ ವಿಠಲ
ಸೊಕ್ಕದೇ ಭವದೊಳು ನೆಕ್ಕದೆ ನಿನ್ನ ನಾಮ 3