ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿ- ಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರಕಾಮಧೇನು ಪ ವಿಷ್ಣುವೆ ಪರಮದೈವವೆಂದು ದುಷ್ಟ ರಾಕ್ಷಸರ ಕೊಂದೆ ಸೃಷ್ಟಿಸಿ ಪಾಲಿಪ ಶ್ರೀರಾಮರ ಇಷ್ಟ ಭಕ್ತರೊಳು ಶ್ರೇಷ್ಠನೆಂದೆನಿಸಿದೆ ಅ ತಾಯಿಯಪ್ಪಣೆಗೊಂಡು ಸೇವೆಗೆ ರಘುಪತಿ ರಾಯನಲ್ಲಿ ನಿಂದು ತನ್ನಾತ್ಮ ಸುಖ ಬಯಸೆನೆಂದು ಶ್ರೀ ಹರಿಗೆ ನುಡಿದುಕಾಯಬೇಕು ಸುಗ್ರೀವನನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯನು ಪಾಯದಿಂದಲಿ ಕೊಲ್ಲಿಸಿ ರವಿಜಗೆ ಸ- ಹಾಯ ಮಾಡಿದೆ ವಾಯುತನಯ1 ಶೌರಿ ಒಡೆಯಗೆ ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರವ ನೊಡಿಸಿದಾಕ್ಷಣ ಲೋಕಮಾತೆಯ ನೊಡಗೂಡಿಸಿದೆ ಶ್ರೀವಾಸುದೇವರಿಗೆ 2 ಸಾರ ತತ್ತ್ವವ ಪೇಳ್ದೆ ಶರಣು ಹೊಕ್ಕ ಮನುಜರ ಘೋರ ದುರಿತವ ಸೀಳ್ದೆ ಧೀರ ತನು ಧುರದುಂಡಿ ಹನುಮಯ್ಯರಿಂ ಸೇವಿಸಿದ ನಿಮ್ಮಂಘ್ರಿ ಕಮಲವದೂರ ಮಾಡದೆ ಎನ್ನ ಸಲಹಯ್ಯ ಕರುಣಾವಾರಿಧಿ ಕಾಗಿನೆಲೆಯಾದಿಕೇಶವ ಮುತ್ತತ್ತಿ ದೊರೆಯೆ3
--------------
ಕನಕದಾಸ
ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1 ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2 ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3
--------------
ಕನಕದಾಸ
ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಪ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ 1 ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ 2 ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ 3 ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ4 ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ 5
--------------
ಕನಕದಾಸ
ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ ಪ ಮಂದವಾರ ದಿವಸದಲ್ಲಿ ಮಿಂದು ಮಡಿಯನುಟ್ಟುಕೊಂಡು ಗೋ ವಿಂದ ಎನುತ ನಾಮವಿಕ್ಕಿ ವಂದನೆಯ ಮಾಡದನಕ 1 ಗರ್ವವನು ಉಳಿದು ಮನದಿ ಸಾರ್ವಭೌಮನನ್ನು ನೆನೆದು ನಿರ್ವಹಿಸಿ ಶೇಷನು ಸುತ್ತಿದ ಪರ್ವತವನ್ನು ಏರದನಕ 2 ಕಾಸು ದುಡ್ಡು ಚಕ್ರ ನಾಣ್ಯ ವೀಸವುಳಿಯದಂತೆ ಬಡ್ಡಿ ವಾಸಿಯಿಕ್ಕಿ ಗಂಟ ಕಟ್ಟ ಈಸುಕೊಂಡು ಸೂಸದನಕ 3 ದೇಶ ದೇಶದಿಂದ ಕಪ್ಪ ಗಾಸಿಯಾಗದಂತೆ ತರಿಸಿ ಕೋಶಕಿಕ್ಕಿ ಕೊಂಬ ಲಕ್ಷ್ಮಿಯ ಈಶನನ್ನು ನೆನೆಯದನಕ 4 ಗುಡವ ಕದಡಿಕೊಂಡು ಸಂಗಡ ಕಡಲೆಯನ್ನು ನೆನಸಿಯಿಟ್ಟು ಒಡೆದ ನಾರಿಕೇಳವು ಸಹಿತ ಒಡೆಯಗೆಂದು ಇಡದ ತನಕ 5 ಆಶಾಪಾಶವನ್ನು ಬಿಟ್ಟು ದೇಶವನ್ನು ತೊಳಲಿ ಬಳಲಿ ಕೇಶವಾದಿ ನಾಮದೊಳಗೆ ವಾಸುದೇವನ ನೆನೆಯದನಕ 6 ಸೃಷ್ಟಿಪಾಲ ಮೆಟ್ಟಿದಂಥ ಬೆಟ್ಟವನ್ನು ಏರಿ ಹೋಗಿ ವರಾಹ ತಿಮ್ಮ ಶೆಟ್ಟಿಯನ್ನು ನೋಡದನಕ 7
--------------
ವರಹತಿಮ್ಮಪ್ಪ
ಮಂಗಳಂಜಯಮಂಗಳಂ ಪ.ವಾತಸುತ ಹನುಮನ ಒಡೆಯಗೆ ಮಂಗಳದಾತ ಶ್ರೀ ರಘುಪತಿಗೆ ಮಂಗಳ ||ಸೇತುವೆಗಟ್ಟಿದ ರಾಯಗೆ ಮಂಗಳಸೀತಾರಮಣಗೆಶುಭಮಂಗಳ1ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರಹಲ್ಲ ಮುರಿದವಗೆ ಮಂಗಳ |ಕಲ್ಲಾದಹಲ್ಯೆಯನುದ್ಧಾರ ಮಾಡಿದಬಲ್ಲಿದದಾಶರಥಿಗೆ ಮಂಗಳ2ಹರಧನು ಮುರಿದ ವಿನೋದಿಗೆ ಮಂಗಳವರದ ತಿಮ್ಮಪ್ಪಗೆ ಮಂಗಳ ||ಪುರಂದರವಿಠಲರಾಯಗೆ ಮಂಗಳಸರುವೋತ್ತಮನಿಗೆ ಶುಭಮಂಗಳ 3
--------------
ಪುರಂದರದಾಸರು