ಕಂಬುಕಂಧರ ಹರಿಯಪ.
ಪಾಲಿತ ಕೌಂತೇಯ
ಭಾಗವತ ತನಕಾಗಿ ತಾ ದಯವಗೈದ ಭರದಿಂದ ತೋರ್ವ
ಭೋಗಿಶಯನ ಸ-
ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ1
ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟು
ಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದು ನಿಂದು
ವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿ
ದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು2
ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನು
ದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನು
ಸೂಸಿ ಕರುಣಾರಾಸ ರಾಜ್ಯದ
ವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ3
ಸುಖದಿಂ ಬಾಳುವದು
ಪರಿಯ ನೀನರಿಯಾ
ನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿ
ಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ4
ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವ
ಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವ
ಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳ
ಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ5