ಎಂದು ನೋಡುವೆ ಎನ್ನ ಗುರುವಿನಾ |
ನಿಂದು ನಂದಿಗಮನನಾ ಎಂದೆಂದಿಗೆ ಪೊಂದಿದವರಿಗಾ |
ಇಂದು ಮೌಳಿಯ ಪ
ತ್ರಿಗುಣ ರೂಪನ ತ್ರಿಭುವನೇಶನ |
ಜಗತಿಧರ ವಿಭೂಷನ ||
ನಗವತಿ ಸುತಿಪತಿಯ ರುದ್ರನ 1
ತಪೋಧನೇಶನ ತಪ ಪ್ರತಾಪನ |
ತಪನ ಶಶಿ ಅಗ್ನಿನೇತ್ರನ |
ಕುಪಿತ ರಹಿತ ಕುಜನ ಮಥನನ |
ಅಪರಮಿತ ಗುಣ ವನದಿ ಶಿವನ 2
ವಿಮಲಗಾತ್ರನ ವಿಶ್ವಪಾಲನ |
ರಮೆಯರಸ ಪದಿಧಾರನ ||
ಸುಜನ ರನ್ನನ |
ನಮಿಸುವರ ಮನೋವಾಸ ಈಶನ 3
ಅಂಧಹರಣನ ಅರ್ಧವೇಷನ |
ಮಂದಮತಿ ವಿದುರನ |
ಬಂಧು ಬಳಗನ ಬಹು ಉದ್ದಂಡನ |
ಅಂಧ ಏಕೇಶವರ್ನ ವದನನ 4
ತತುವನಾಥನ ತುಂಗ ವರದನ |
ಸತತ ವೈರಾಗ್ಯ ಭಾಗ್ಯನ ||
ಪತಿತ ಪಾವನ ವಿಜಯ ವಿಠ್ಠಲನ್ನ |
ಪತಿ ವಿಶ್ವೇಶನ 5