ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪನ್ನಗಾಶಯನ ಹರಿ ವೆಂಕಟರಮಣ ಪ ವರ ಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ ಕರಿಯ ಸಲಹಿದಂತೆ ಕರುಣವಿರಲಂತೆ 1 ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ ಧುರದೊಳು ನರನ ಶಿರವ ಉಳುಹಿದಂತೆ 2 ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ 3 ಪರಮ ಮಂಗಳಮೂರ್ತಿ ಪಾವನ ಕೀರ್ತಿ ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ 4 ಮಕರ ಕುಂಡಲಧರ ಮಕುಟ ಕೇಯೂರ ಸಕಲಾಭರಣ ಹಾರ ಸ್ವಾಮಿ ಉದಾರ 5 ತಾಳಲಾರೆನು ನಾನು ಬಹಳ ದಾರಿದ್ರ್ಯ ಕೇಳುವರಿಲ್ಲ ಬಹು ಭವಭಯ ಕ್ಷುದ್ರ 6 ನೋಡಬೇಡೆನ್ನವಗುಣವ ದಮ್ಮಯ್ಯ ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ 7 ಭಕ್ತಜನ ಸಂಸಾರಿ ಬಹುದುರಿತ ಹಾರಿ ಮುಕ್ತಿದಾಯಕ ದಾರಿ ಮುಂದೆ ನೀ ತೋರಿ8 ವರಾಹತಿಮ್ಮಪ್ಪ ಒಲವಾಗೆನ್ನಪ್ಪ ಸಾರಿದವರ ತಪ್ಪ ಸಲಹೊ ನೀನಪ್ಪ 9
--------------
ವರಹತಿಮ್ಮಪ್ಪ