ಪಶುಗಳ ಒಡನಾಡಿ ಪಾಮರನು ನಾನಾದೆ
ಪಶುಪತಿಯೆ ನೀ ಬೇಗ ಬಾರೈ ಪ
ಎಸೆವ ಆ ಸಮಯನುಣ್ಣಲೋಸುವನೊ ನಾನಿನ್ನು
ಶಿಶು ಹಾದು ನಿಜ ಸುಖವು ತೋರೈ ಅ.ಪ
ಕಚ್ಚಿ ಕೈಬಾಯಿ ನಿಮ್ಮಿಚ್ಚೆಯಾಗಿರುತಿಹುದೂ
ಸಚ್ಚಿದಾನಂದಾತ್ಮ ನೋಡೈ
ಉಚ್ಚರಿಸುವಾದಿ ವ್ಯಾಸಚ್ಚರಿತ ನಾಮವನೂ
ಅಚ್ಚಳಿಯದಿರದಂತೆ ನೋಡೈ 1
ತೃಷೆಯ ನೀಗಿಸಲಿಂತಾ ಹೊಸಪರಿಯ ಬಿನ್ನಹುವು
ಹಸುವಿಗಾಧಾರವನು ತೋರೈ
ಪುಸಿಯದಿರು ನೀನಿದಕೆ ಬಿಸನಾಡದಿರುಯೆನ್ನಾ
ನೊಸಲ ತಿಲಕವೆ ವೋಡಿಬಾರೈ 2