ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವಿರಲಿ ದಯವಿರಲಿ ದಾಮೋದರ ಪ. ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ. ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ 1 ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ 2 ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ಮøತಿಗೆ ವಿಶೇಷ ಮಾರುತಿರಮಣ ನಿನ್ನ 3 ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು 4 ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು 5 ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ 6 ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ 7 ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ8
--------------
ಗೋಪಾಲದಾಸರು