ಅಸುರರ ತಾಯಿಯು ದೊಡ್ಡಮ್ಮಾ ಸುಮ
ನಸರಿಗೆ ಮಾತೆಯು ಚಿಕ್ಕಮ್ಮಾ ಪ
ನೋಡಿದದು ಬಯಸುವುದು ದೊಡ್ಡಮ್ಮಾ
ಬೇಡವೆಂದದ್ದು ಬಿಡುವುದು ಚಿಕ್ಕಮ್ಮಾ 1
ಹೇಳಿದಂತೆ ಕೇಳುವುದಿಲ್ಲ ದೊಡ್ಡಮ್ಮಾ
ಆಳಿನಂತೆ ನಡೆದುಕೊಂಬವದು ಚಿಕ್ಕಮ್ಮ 2
ಅನಾರೋಗ್ಯ ವಸ್ತುಗಳು ದೊಡ್ಡಮ್ಮಾ
ದಿವ್ಯಾರೋಗ್ಯ ಪದಾರ್ಥಗಳು ಚಿಕ್ಕಮ್ಮ 3
ಕ್ಷುಕ್ಷಿಂಬರ ಯೋಚನೆ ದೊಡ್ಡಮ್ಮಾ
ಅಕ್ಷರಾಭ್ಯಾಸಸಕ್ತಿ ಚಿಕ್ಕಮ್ಮ 4
ಒಬ್ಬನೆ ತಿನ್ನುವುದು ದೊಡ್ಡಮ್ಮಾ
ಹಬ್ಬ ಮಾಡಿ ಇತರರಿಗಿಡುವುದು ಚಿಕ್ಕಮ್ಮ 5
ಸಿಟ್ಟು ಮಾಡಿ ಬಯ್ಯುವುದು ದೊಡ್ಡಮ್ಮಾ
ಜ್ಞಾನಿಗಳ ಸೇವಿಸುವುದು ಚಿಕ್ಕಮ್ಮ7
ಅಪಕಾರ ಮಾಡುವುದು ದೊಡ್ಡಮ್ಮಾ
ಉಪಕಾರ ವೆಣಿಸುವುದು ಚಿಕ್ಕಮ್ಮ 8
ಉಸುರೆಂದು ಅಳುವುದು ದೊಡ್ಡಮ್ಮಾ
ಹಸನ್ಮುಖರಾಗಿರುವುದು ಚಿಕ್ಕಮ್ಮ 9
ನೆರೆ ಜ್ಞಾಪಕ ಶಕ್ತಿ ಚಿಕ್ಕಮ್ಮ 10
ಅರರೆ ಕಲಿಯ ಪತ್ನಿ ದೊಡ್ಡಮ್ಮಾ
ಗುರುರಾಮ ವಿಠಲನರಸಿ ಚಿಕ್ಕಮ್ಮ 11