ತಾವಲ್ಲಿ ನೆನೆಯಲು ದಶಮತಿ ಗುರುಗಳು
ನಾವಿಲ್ಲಿ ಸುಖಿಗಳು ಸುಲಭದಿಂದ ಪ
ಪೂರತಿ ಮನದೊಳಗಾಗುವಂತೆ
ತಾರಾ ರಮಣನು ತಾ ಮ್ಯಾಲೆ ಉದಿಸಲು
ವಾರಿಧಿ ಹರುಷದಿ ಉಕ್ಕುವಂತೆ 1
ತರಣಿ ಕಿರಣ ಪಸರಿಸೆ ಸರೋವರದಲ್ಲಿ
ಸರಸಿಜ ವಿಕಸಿತವಾಗುವಂತೆ
ವಾರಿದ ಮ್ಯಾಲಿರೆ ತಾ ನೋಡಿ ಮಯೂರ
ಮೀರಿ ಹರುಷದಿ ಕುಣಿ ಕುಣಿದಾಡುವಂತೆ2
ವ್ಯಾಸ ದೇವರ ಕೂಡ ಮಾತುಗಳಾಡುವಾಗ
ಶುಭ ನಮಗೆ
ವಾಸುದೇವವಿಠಲ ಪಾಶದಿಂದಾಡುವಾಗ
ವಾಸ ಅಕ್ಷಯವೆನ್ನಿ ಕೃಷ್ಣೆಯಂತೆ 3