ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಶ್ರೀ ರಾಮನ ಜಾನಕಿ ಪ್ರೇಮನ ಅನುದಿನ ಪ ಶುಭ ಕಲ್ಯಾಣನ ಮಾಧವ ಮುಕುಂದನ 1 ವಿಶ್ವ ಪ್ರಕಾಶನಾ --ನಂದದಿ ಹೃದಯ ಗೋವಿಂದನ ಬಿಡದಿನ್ನು 2 ಕಂದರ್ಪ ಜನಕನ ಕರಿರಾಜ ವರದನ ಸಿಂಧುಶಯನ ಹರಿ ಶ್ರೀ ಜಗನ್ನಾಥನ 3 ಸೌಂದರ್ಯ ರೂಪನ ಪುರುಷೋತ್ತಮನ ಕುಂದರದನ ಹರಿ ಕೋಮಲಾಂಗನ 4 ಪರಮ ಪುರುಷನ ಪತಿತಪಾವನನ ನರಹರಿರೂಪನ ನಾರಾಯಣನ 5 ಗರುಡಾರೂಢನ ಕರುಣಾಸಾಗರನ ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6 ಉರಗಾದ್ರಿ ವಾಸನ ವಸುದೇವಸುತನಾ ಭವಪಾಪ ಸಂಹಾರನ 7 ಶರಣರ ಕಾಯುವನ ಶ್ರೀನಿವಾಸನ ಉರಗಶಯನನ ಹರಿವಾಸುದೇವನಾ 8 ಮಂಗಳಮೂರುತಿ ಮಹಾನುಭಾವನ ಗಂಗೆಯ ಪಡೆದನ ಘನ ಗಂಭೀರನ9 ಶೃಂಗಾರ ಭೂಷಣನ ಸುಗುಣ ಪ್ರತಾಪನ ಅಂಗನೆಯರೆಡ ಬಲದಲಿರುವನ 10 ರಂಗನಾಯಕನ ರಾಜಾಧಿರಾಜನ ಮಂಗಾರಮಣನ ಮಧುಸೂದನನಾ 11 ರಂಗವುಳ್ಳ ಪೀತಾಂಬರ ಧರನಾ ಕಂಬು ಕಂಧರನಾ 12
--------------
ಹೆನ್ನೆರಂಗದಾಸರು
ರಾಮಾ ರಕ್ಷಿಸೋ ಎನ್ನ ಪ್ರೇಮಾ ಸಂಪೂರ್ಣಕಾಮಾ ಪ ಸ್ವಾಮಿ ಜಗನ್ನಾಥ ಸರ್ವಾಂತರ್ಯಾಮಿ ರಾಮಿಯ ರಮಣ ಶ್ರೀ ರಘುಕುಲಭೂಷಣ ಅ.ಪ ಅಂಗಜ ಜನಕಯ್ಯ ಮೋಹನಾಂಗ ಜಗದಂತರಂಗ ಶೃಂಗಾರ ಪರಿಮಳ ಭೂಷಿತಾಂಗಾ ಒಪ್ಪಿರುವೊ ರಂಗಾ ಗಂಗೆಯ ಜನಕ ತುರಂಗನೇರಿದಾ ಮಂಗಳ ಮಹಿಮ ಕುರಂಗಲೋಚನಾ ಅಂಗನೆಯರೆಡಬಲ ಸಂಗಡದಲಿ ಮೋಹಂಗಳ ಮಾಡುತ ಶೃಂಗಾರದಲಿ ರಂಗ ಮಂಟಪ ಮಧ್ಯರಂಗಲಿರುವ ರಾಮಂಗಾರ --- ಹೆನ್ನರಂಗನಾಯಕ 1 ಚಂದದಿಂದಾದಿ ವೇಣು -----ನಂದದಿ ಮೋದ ಮಂದಾರಧರ ಮಾಧವನಾದ ಗೋವಿಂದ ನಿ ನೋಡಾ ಸಿಂಧು ಶಯನ ಮುನಿ ವಂದಿತ ಚರಣಾರವಿಂದ ಭಜಿಸುವ ಕಂದನ ತೋರದಯ ದಿಂದ ಪಾಲಿಸುವ ತಂದೆಯು ನೀನೆ ಎಂದು ತಿಳಿದು ಈ ಪಾದ ಹೊಂದಿ ಭಜಿಸುವೆನು 2 ಚಂಡಶಾಸನ ಬಿರುದಿನಾ ದೇವಾದಿದೇವ ಮಂಡಲಾಧಿಪ ಮಹಾನುಭಾವ ಭಕ್ತರ ಕಾಯುವ ಪುಂಡರೀಕ ವರದಂಡ-----ಕುಂಡಲಿಶಯನ ಕೋ ದಂಡಧರ ಬಲೋದ್ದಂಡ ವಾನರದಂಡನೆ ಕೂಡಿಸಿ ಪುಂಡ ರಕ್ಕಸರ ಹಿಂಡನೆ ಹಿಡಿದು ಮಂಡಿಗಳನು ಬಿಡದೆ ಚಂಡಿಸಿದಂಥಾ ಗಂಡರಗಂಡ `ಶ್ರೀ ಹೆನ್ನೆವಿಠ್ಠಲಾ ' 3
--------------
ಹೆನ್ನೆರಂಗದಾಸರು