ಲಿಂಗ ಬಂದ ನೋಡೊ ಶಂಕರ ಲಿಂಗ ಬಂದ ನೋಡೊ |ಅಂಗಜನುರುಹಿದ ಮಂಗಳ ಮೂರುತಿ |ತಿಂಗಳ ಸೂಡಿದ ಕಂಗಳ ಮೂರುಳ್ಳಪಸುರಗಂಗಾಧರನೂ ಪಾರ್ವತಿವರ ಪರಮೇಶ್ವರನೂ |ಪರಮಪುರುಷಪರಾತ್ಪರಪರತರ | ಸ್ಥಿರಚರವಣು ತೃಣ ಭರಿತ ಸದಾಶಿವ1ಗಜಚರ್ಮಾಂಬರನೂಪುರಹರಭುಜಗಭೂಷಹರನೂ | ಅಜಸುರ ವಂದಿತತ್ರಿಜಗವ್ಯಾಪಕ |ಸುಜನರಿಗಿತ್ತ ಸುನಿಜಪದ ಮಹಘನ2ಆರು ಚಕ್ರ ಮೀರಿ ಸಹಸ್ರಾರ ಮನೆಯನ್ನೇ ಸೇರಿ |ಸಾರಾಸಾರ ವಿಚಾರ ರಹಸ್ಯವ-ಪಾರಪರಾತ್ಪರಗುರುತರ ಶಂಕರ3