ಹೆದರಿಕೆ ಬರುತದೆಲೋ ಪದುಮಾಕ್ಷ
ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ
ಹೆದರಿಕೆ ಬರುತಿದೆ ಜಗದ ಜನರು ನಿನಗೆ
ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ
ಹಳಿವರು ಹೆಳವನೆಂದು ಅಂಜದೆ ನಿನಗೆ
ತಲೆಯಿಲ್ಲದವನೆನುವರು
ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು
ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1
ದೃಢದಿ ಭಕುತಜನರು ಬೇಡಿದ ವರವು
ಕೊಡಬೇಕಾಗುವುದೆನುತ
ಓಡಿ ಹಾವಿನಮೇಲೆ ಪವಡಿಸಿದ ಮಹ
ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2
ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ
ಸದನಗೈದನುಯೆಂಬರು
ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ
ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3
ಕುದುರೆಮಾವುತನೆಂಬರು ಎಲವೋ ರಂಗ
ಕದನಗಡಕನೆನುವರು
ಹದಿನಾರು ಸಾವಿರ ಸುದತಿಯರೊಶನಾದ
ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4
ವಿಪಿನವಾಸಿಕನೆನುವರು ನಿಷ್ಕರುಣದಿ ನೀ
ಕಪಿವರನ ತರಿದೆನುವರು
ಕಪಟ ತಿಳಿಯುವರಾರು
ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5